ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ; 6 ಮೃತ ದೇಹಗಳು ಛಿದ್ರ ಛಿದ್ರ!!

ಚಿಕ್ಕಬಳ್ಳಾಪುರ: 

     ರಾಜ್ಯದಲ್ಲಿ ಮತ್ತೊಂದು ಕಲ್ಲು ಕ್ವಾರಿ ದುರಂತ ಸಂಭವಿಸಿದ್ದು, ಜಿಲೆಟಿನ್ ಸ್ಫೋಟಗೊಂಡು 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಗ್ರಾಮದಲ್ಲಿ ನಡೆದಿದೆ.

     ಟಾಟಾ ಏಸ್ ವಾಹನದಲ್ಲಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟಗೊಂಡಿದೆ ಎನ್ನಲಾಗಿದೆ. ಜಿಲೆಟಿನ್​ ಸಾಗಿಸುತ್ತಿದ್ದ ಟಾಟಾ ಏಸ್ ಡ್ರೈವರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಂಜನಿಯರ್, ಕಂಪ್ಯೂಟರ್ ಆಪರೇಟರ್, ವಾಚ್​ಮ್ಯಾನ್​, ಅಕೌಂಟೆಂಟ್ ಸೇರಿದಂತೆ ಓರ್ವ ಸ್ಥಳೀಯ ವ್ಯಕ್ತಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

   ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದಿಂದ ಮೃತದೇಹಗಳು ಛಿದ್ರ ಛಿದ್ರವಾಗಿ ಕಲ್ಲು ಕ್ವಾರಿಯಲ್ಲಿ ತೂರಿಬಿದ್ದಿವೆ. ಈ ಕ್ರಷರ್​ ಗುಡಿಬಂಡೆಯ ಬಿಜೆಪಿ ಮುಖಂಡ ನಾಗರಾಜ್, ಆಂಧ್ರ ಪ್ರದೇಶದ ರಾಘವೇಂದ್ರ ರೆಡ್ಡಿ, ಶಿವಾರೆಡ್ಡಿ ಮಾಲೀಕತ್ವದ ಕ್ರಷರ್​ ಇದಾಗಿತ್ತು ಎನ್ನಲಾಗ್ತಿದೆ.

      ಸ್ಥಳಕ್ಕೆ ಸಚಿವ ಸುಧಾಕರ್​ ಮತ್ತು ಜಿಲ್ಲಾಡಳಿತ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಎಸ್​ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸ್ಥಳಕ್ಕೆ ಎಫ್​ಎಸ್​ಎಲ್, ಬಿಡಿಡಿಎಸ್​​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಜಿಲ್ಲಾಧಿಕಾರಿ ಲತಾ. ಆರ್ ಭೇಟಿ ನೀಟಿದ್ದು, ಪರಿಶೀಲನೆ ನಡೆಸಿದ್ದಾರೆ. 

     ದುರಂತ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ದುರಂತದ ವಾರ್ತೆಯನ್ನ ಕೇಳಿ ನೋವಾಗಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಹಾಗೂ ಘಟನೆಯಲ್ಲಿ ಗಾಯಗೊಂಡವರು ಶೀಘ್ರದಲ್ಲೇ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link