ಬೆಳಗಾವಿ :
ದೇವರ ಫೋಟೋ ಎದುರು ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ತಗುಲಿ ಬಾಲಕಿ ಸಜೀವ ದಹನವಾಗಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಆನಗೋಳದಲ್ಲಿ ನಡೆದಿದೆ.
8 ವರ್ಷದ ಬಾಲಕಿ ಕಸ್ತೂರಿ ಮೃತಳು. ರಾತ್ರಿ ತನ್ನ ತಂದೆ ತಾಯಿಯ ಜೊತೆ ಮಗಲಿದ್ದಾಗ ದೇವರಿಗೆ ಹಚ್ಚಿದ್ದ ದೀಪದಿಂದ ಬತ್ತಿ ಕೆಳಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಮೊದಲು ಯಾರಿಗೂ ತಿಳಿದಿರಲಿಲ್ಲ, ಬಳಿಕ ಎದ್ದು ನೋಡುವಾಗ ಇಡೀ ಕೋಣೆ ಬೆಂಕಿಯಿಂದ ಆವರಿಸಿಕೊಂಡಿತ್ತು. ಅದು ಬಾಲಕಿ ಮಲಗಿದ್ದ ಬೆಡ್‌ಶೀಟ್, ಬಟ್ಟೆ ಎಲ್ಲಕ್ಕೂ ತಗುಲಿ ಬಾಲಕಿ ಕಸ್ತೂರಿ ಮೃತಪಟ್ಟಿದ್ದಾಳೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುವ ವೇಳೆಗಾಗಲೇ ಹಲವು ವಸ್ತುಗಳು ಸುಟ್ಟುಕರಕಲಾಗಿದ್ದವು. ಅದೃಷ್ಟವಶಾತ್ ಬಾಲಕಿಯ ತಂದೆ-ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
