ಬ್ಯಾಗ್ ತೂಕ ಹೊರುವಂತಿಲ್ಲ, ಹೆಚ್ಚು ಹೋಂವರ್ಕ್ ಮಾಡುವಂತಿಲ್ಲ..! : ಹೊಸ ರೂಲ್ಸ್..?!

ಬೆಂಗಳೂರು :  

       ಶಾಲೆಗೆ ಹೋಗುವ ಮಕ್ಕಳ ತೂಕಕ್ಕಿಂತ ಬ್ಯಾಗ್ ತೂಕವೇ ಹೆಚ್ಚಿರುತ್ತದೆ. ಇದೀಗ ಮಕ್ಕಳ ಬ್ಯಾಗ್ ಭಾರ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಭಾರದ ಶಾಲಾ ಬ್ಯಾಗ್‍ಗಳಿಗೆ ಮಿತಿ ಹೇರಲಾಗಿದ್ದು, ಮಕ್ಕಳಿಗೆ ಕೊಡುವ ಹೋಂ ವರ್ಕ್ ಕಿರಿಕಿರಿಗೂ ನಿಯಂತ್ರಣ ನೀಡಲಾಗಿದೆ.

        ಹೌದು ಇನ್ನು ಮುಂದೆ ಮಕ್ಕಳು ಮಣ ಭಾರದ ಬ್ಯಾಗ್ ಹೊತ್ತುಕೊಂಡು ಹೋಗಬೇಕಾಗಿಲ್ಲ. ಬ್ಯಾಗ್ ಭಾರ ಮಿತಿ ಪಾಲಿಸುವಂತೆ ಕೇಂದ್ರ ಮಾನವ‌ ಸಂಪನ್ಮೂಲ ಇಲಾಖೆ ಸೂಚಿಸಿದೆ. ಅಲ್ಲದೆ ತರಗತಿಗೆ ಅನುಗುಣವಾಗಿ ಬ್ಯಾಗ್ ಭಾರ ಪ್ರಮಾಣ ನಿಗದಿ ಮಾಡಿದ್ದು, ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ಹೊರಡಿಸಲಾಗಿದೆ.

ಎಷ್ಟು ಕೆಜಿ ತೂಕ?

1. 1 ಮತ್ತು 2 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ನ ತೂಕ 1.5 ಕೆ.ಜಿ ದಾಟುವಂತಿಲ್ಲ
2. 3 ಮತ್ತು 4 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ತೂಕ 2 ರಿಂದ 5 ಕೆ.ಜಿ ಇರಬೇಕು
3. 6 ಮತ್ತು 7 ನೇ ತರಗತಿಗೆ ಮಕ್ಕಳ ಸ್ಕೂಲ್ ಬ್ಯಾಗ್ 4 ಕೆ.ಜಿ ಮಾತ್ರ ಇರಬೇಕು
4. 8 ಮತ್ತು 9 ನೇ ತರಗತಿ ಮಕ್ಕಳಿಗೆ 4.5 ಕೆ.ಜಿ ಶಾಲಾ ಬ್ಯಾಗ್
5. 10 ನೇ ತರಗತಿ ಮಕ್ಕಳಿಗೆ 5 ಕೆ.ಜಿ ತೂಕದ ಸ್ಕೂಲ್ ಬ್ಯಾಗ್

      1 ಮತ್ತು 2 ನೇ ತರಗತಿ ಮಕ್ಕಳಿಗೆ ಶಿಕ್ಷಕರು ಹೋಂ ವರ್ಕ್ ಕೊಡುವಂತಿಲ್ಲ. ಹೋಂ ವರ್ಕ್ ಕೊಟ್ಟರೂ ಭಾಷೆ ಮತ್ತು ಗಣಿತ ವಿಷಯಗಳಷ್ಟೇ ಕೊಡಬೇಕು. ಮಕ್ಕಳಿಗೆ ಹೆಚ್ಚುವರಿ ಬುಕ್ ಗಳನ್ನು ತರುವಂತೆ ಶಿಕ್ಷಕರು ಒತ್ತಾಯಿಸುವಂತಿಲ್ಲ. ಅಲ್ಲದೇ ಹೆಚ್ಚುವರಿ ಶಾಲಾ ಪರಿಕರಗಳನ್ನು ತರುವಂತೆಯೂ ಬಲವಂತ ಮಾಡಬಾರದು.

      ಈ ಹಿಂದೆ ಬ್ಯಾಗ್ ಭಾರ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆದಿದ್ದವು. ಪೋಷಕರು ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿಡಿದ್ದರು. ಸದ್ಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನಿರ್ದೇಶನಗಳಿಂದ ಪೋಷಕರು ನಿರಾಳರಾಗಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap