ಸೀಲ್’ಡೌನ್ ಆಗಿದ್ದ ಗೊರವನಹಳ್ಳಿ ದೇವಸ್ಥಾನ ಓಪನ್!!

      ಸೀಲ್ ಡೌನ್ ಆಗಿದ್ದ ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಇಂದಿನಿಂದ(ಜು.28) ಭಕ್ತರಿಗೆ ದರ್ಶನ ಕಲ್ಪಿಸಿದೆ

     ಮಹಾಲಕ್ಷ್ಮಿ ದೇವಾಲಯ ಹಿಂಭಾಗದ ಮಾರಮ್ಮನ ದೇವಾಲಯದ ಅರ್ಚಕನ ಮಡದಿಗೆ ಕೊರೋನಾ ದೃಡಪಟ್ಟ ಹಿನ್ನಲೆ ದೇವಾಲಯವನ್ನು ಜುಲೈ 20ರಿಂದಲೇ ಸೀಲ್ ಡೌನ್ ಮಾಡಲಾಗಿತ್ತು.

      ಇನ್ನೇನು ಇದೇ ತಿಂಗಳ 31 ರಂದು ವರಮಹಾಲಕ್ಷ್ಮಿ ಹಬ್ಬವಾಗಿದ್ದು ಕರುನಾಡಿನ ಸುಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಜುಲೈ 28 ರ ಮುಂಜಾನೆಯಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ ಭಾನುವಾರ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ತಾಲ್ಲೂಕಿನ ಪುಣ್ಯಕ್ಷೇತ್ರ ಶ್ರೀ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಿಯ ದೇವಾಲಯವನ್ನು ಜುಲೈ 27 ರಂದು ತೆರೆದು ಸ್ವಚ್ಛತೆ ಮತ್ತು ಕೊರೊನಾ ಭದ್ರತಾ ಕ್ರಮ ಕೈಗೊಂಡು ಮರುದಿನ ಮುಂಜಾನೆಯಿಂದ ಭಕ್ತರಿಗೆ ದೇವಿಯ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ .
  
      ಜುಲೈ 31 ಶುಭ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನವೂ ದೇವಿಯ ದರ್ಶನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ದೇವಿಯ ವಿಶೇಷ ಪೂಜೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ.ಹಣ್ಣು-ಕಾಯಿ ಹೂವು ಯಾರೂ ತರಬಾರದು ಪ್ರಸಾದ ವಿತರಣೆಯನ್ನು ಈಗಾಗಲೇ ಕಡ್ಡಾಯವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು .
  
ವಿಶೇಷ ಸೂಚನೆ :-
     65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ೧೦ ವರ್ಷದ ಒಳಗಿನ ಮಕ್ಕಳಿಗೆ ಮಹಾಲಕ್ಷ್ಮಿ ದರ್ಶನಕ್ಕೆ ಅವಕಾಶವಿಲ್ಲ ಎಂದಿದ್ದಾರೆ.ಬರುವಂತಹ ಭಕ್ತಾದಿಗಳು ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link