ಬಿಜೆಪಿ ತೆಕ್ಕೆಗೆ ಬಿತ್ತು ಬಿಬಿಎಂಪಿ ಮೇಯರ್ ಗದ್ದುಗೆ !!!

ಬೆಂಗಳೂರು:  

       ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 53ನೇ ಮೇಯರ್ ಆಗಿ ಬಿಜೆಪಿಯ ಜೋಗುಪಾಳ್ಯ ವಾರ್ಡ್ ನ ಕಾರ್ಪೋರೇಟರ್ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ.

      ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ಕೇಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಇಂದು ನಡೆದ ಚುನಾವಣೆಯಲ್ಲಿ ಒಟ್ಟು 129 ಮತಗಳನ್ನು ಪಡೆಯುವ ಮೂಲಕ ಜೋಗುಪಾಳ್ಯ ವಾರ್ಡಿನ ಬಿಜೆಪಿ ಸದಸ್ಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.

      ಬಿಬಿಎಂಪಿಯಲ್ಲಿ ಒಟ್ಟು 257 ಇದ್ದು. ಬಿಜೆಪಿಗೆ 125, ಕಾಂಗ್ರೆಸ್ 104, ಜೆಡಿಎಸ್ 21 ಹಾಗೂ 7 ಪಕ್ಷೇತರ ಕಾರ್ಪೋರೇಟರ್ ಗಳಿದ್ದಾರೆ. ಮೇಯರ್ ಪಟ್ಟಕ್ಕಾಗಿ ಮ್ಯಾಜಿಕ್ ನಂಬರ್ 129 ಆಗಿದೆ. ಬಿಜೆಪಿಯ 125 ಹಾಗೂ ಪಕ್ಷೇತರರು 5 ಮಂದಿ ಮತ ಚಲಾಯಿಸಿದ್ದಾರೆ. ಗೌತಮ್ ಅವರ ಪರವಾಗಿ 129 ಮತಗಳು ಚಲಾವಣೆಯಾಗಿದೆ.

      ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಕೊನೆ ಕ್ಷಣದಲ್ಲಿ ಪಕ್ಷೇತರ ಪಾಲಿಕೆ ಸದಸ್ಯರ ಜೊತೆಗಿನ ಮಾತುಕತೆ ಯಶಸ್ವಿಯಾಗದ ಪರಿಣಾಮ ಮೇಯರ್ ಹುದ್ದೆ ಕೈ ತಪ್ಪಿತ್ತು ಆದರೆ ಈ ಬಾರಿ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮ ಬಿಜೆಪಿ ಬಿಬಿಎಂಪಿ ಅಧಿಕಾರವನ್ನು ಹಿಡಿದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap