ಬೆಂಗಳೂರು:
ಸರ್ಕಾರಿ ರಜೆಗಳ ಸಂಖ್ಯೆ ಕಡಿತ ಮಾಡಲು ಸರ್ಕಾರ ಚಿಂತಿಸಿದ್ದು, ಇದರ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ.
ಸರ್ಕಾರಿ ರಜೆಗಳು ಹೆಚ್ಚಾಗಿರುವ ಕಾರಣದಿಂದ ಸರ್ಕಾರಿ ಕೆಲಸಗಳು ವೇಗವಾಗಿ ಸಾಗುತ್ತಿಲ್ಲ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರಿ ರಜೆಗಳಲ್ಲಿ ಕಡಿತ ಮಾಡಲು ಸರ್ಕಾರ ಚಿಂತಿಸಿ, ಕಾರ್ಯೋನ್ಮುಖವಾಗಿದೆ.
2019-20ರ ವರ್ಷದಲ್ಲಿ 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ ಹಾಗೂ 21 ಸಾರ್ವತ್ರಿಕ ರಜಾ ದಿನಗಳು ಬರುತ್ತವೆ.19 ಸಾಂದರ್ಭಿಕ ರಜೆಗಳು ಇವೆ. ರಜಾ ದಿನಗಳ ಸಂಖ್ಯೆ ವಿಪರೀತವಾಗಿದೆ ಎನ್ನುವ ಮಾತೊಂದು ಸಾಕಷ್ಟು ಬಾರಿ ಸಮಾಜದಲ್ಲಿ ಕೇಳಿ ಬರುತ್ತಿದ್ದು, ಇವುಗಳನ್ನು ರದ್ದು ಮಾಡುವ ಬಗ್ಗೆ ಕೂಡ ಒತ್ತಡ ಹೆಚ್ಚಾಗುತ್ತಿದೆ.
ಇದಲ್ಲದೇ ಅಧಿಕಾರಿಗಳಿಗೆ ಅನುಕೂಲವಾಗಲು ವಾರದ ಅಂತ್ಯದಲ್ಲಿ ರಜೆಗಳನ್ನು ನೀಡುವ ಕುರಿತು ಪರಿಶೀಲನೆ ನಡೆಸಬೇಕಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಸಚಿವ ಸಂಪುಟ ಉಪಸಮಿತಿಯನ್ನು ರಚನೆ ಮಾಡಲಾಗಿದೆ ಅಂತ ಹೇಳಿದ್ದಾರೆ.
ಸಚಿವ ಸಂಪುಟ ಉಪಸಮಿತಿಯು ಪರಿಶೀಲನೆ ನಡೆಸಿ ಯಾವ ರಜೆಗಳನ್ನು ತೆಗೆದುಹಾಕಬೇಕು, ಯಾವ ರಜೆಗಳನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ. ಅದರ ಆಧಾರದಲ್ಲಿ ಸರ್ಕಾರವು ರಜೆಗಳನ್ನು ಕಡಿತಗೊಳಿಸುವ ನಿರ್ಣಯ ತೆಗೆದುಕೊಳ್ಳಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
