ಸರಕಾರಿ ನೌಕರರ ಸಾಂದರ್ಭಿಕ ರಜೆ 15 ರಿಂದ 10ಕ್ಕೆ ಇಳಿಕೆ!!

ಬೆಂಗಳೂರು :

     ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಸರ್ಕಾರಿ ನೌಕರರ ಸಾಂದರ್ಭಿಕ ರಜೆಯನ್ನು 15 ದಿನಗಳಿಂದ 10 ದಿನಗಳಿಗೆ ಕಡಿತ ಮಾಡಿ ಆದೇಶ ಹೊರಡಿಸುವ ಮೂಲಕ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್ ನೀಡಿದೆ.

     ಹಿಂದಿನ ಸರ್ಕಾರದ ಅವಧಿಯಲ್ಲಿ ಆರನೇ ವೇತನ ಆಯೋಗದ ಶಿಫಾರಸಿನಂತೆ ನಾಲ್ಕನೇ ಶನಿವಾರ ನೌಕರರಿಗೆ ರಜೆ ಘೋಷಿಸಿರುವ ಸರ್ಕಾರ, ಸಾಂದರ್ಭಿಕ ರಜೆ ಕಡಿತ ಮಾಡಲು ನಿರ್ಧರಿಸಿತ್ತು. ಅದರಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

      ಈ ಆದೇಶ ಜು. 13 ರಿಂದ ಪೂರ್ವಾನ್ವಯವಾಗಲಿದ್ದು, ಆ ದಿನಾಂಕಕ್ಕೆ ನೌಕರರ ಖಾತೆಯಲ್ಲಿ 10 ಕ್ಕಿಂತ ಹೆಚ್ಚು ಸಾಂದರ್ಭಿಕ ರಜೆಗಳಿದ್ದರೂ ಅದನ್ನು 10 ಕ್ಕೆ ಸೀಮಿತಗೊಳಿಸಬೇಕು. ಅದೇ ರೀತಿ ಕಡಿಮೆ ರಜೆ ಇದ್ದರೆ ಅದನ್ನೇ ಪರಿಗಣಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap