ಕೇಂದ್ರದಿಂದ ಕಳಸಾ-ಬಂಡೂರಿ ಯೋಜನೆಗೆ ಬಿತ್ತು ಗ್ರೀನ್ ಸಿಗ್ನಲ್!!

ನವದೆಹಲಿ: 

       ಕುಡಿಯುವ ನೀರಿಗಾಗಿ ಕಳಸಾ, ಬಂಡೂರಿ, ಹಳತಾರಾ ಹಳ್ಳಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಯೋಜನೆಗೆ ಷರತ್ತುಬದ್ಧ ಒಪ್ಪಿಗೆ ನೀಡಿದೆ.

      ಅ. 17ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ‘ಪರಿಸರ ಪರಿಣಾಮ ಅಧ್ಯಯನ ಅಧಿ ಸೂಚನೆ–2006’ ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ತಕರಾರು ಇಲ್ಲ ಎಂದು ಹೇಳಿದೆ.

      ಮೂರು ರಾಜ್ಯಗಳು (ಗೋವಾ–ಮಹಾರಾಷ್ಟ್ರ–ಕರ್ನಾಟಕ) ಮಾತುಕತೆ ಮೂಲಕ ಈ ವಿವಾದವನ್ನು ಇತ್ಯರ್ಥಪಡಿಸಿಕೊಂಡು ಯೋಜನೆ ಅನುಷ್ಠಾನ ಮಾಡಬಹುದು ಎಂದು ಮಹದಾಯಿ ನ್ಯಾಯ ಮಂಡಳಿಯು 2018ರ ಆಗಸ್ಟ್ 14ರಂದು ನೀಡಿದ ತೀರ್ಪಿನಲ್ಲಿ ಹೇಳಿತ್ತು. ಇದರ ಅನುಸಾರ ಕರ್ನಾಟಕ ಸರ್ಕಾರವು ಸಂಬಂಧ ಪಟ್ಟ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದ ಯೋಜನೆ ಜಾರಿಗೊಳಿಸಬಹುದು ಎಂದು ಪತ್ರ ಉಲ್ಲೇಖಿಸಿದೆ.

       ಇದರಿಂದಾಗಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪಶ್ಚಿಮ ವಾಹಿನಿ ನೀರನ್ನು ಪೂರ್ವಕ್ಕೆ ತಿರುಗಿಸುವ ಯೋಜನೆಗೆ ಇದ್ದ ಪ್ರಮುಖ ಅಡೆತಡೆ ನಿವಾರಣೆಯಾದಂತಾಗಿದ್ದು, ದಶಕದಿಂದ ಮಹದಾಯಿ ನೀರಿಗಾಗಿ ಹೋರಾಡುತ್ತಿರುವ ಕರ್ನಾಟಕಕ್ಕೆ ದೀಪಾವಳಿಯ ಹೊಸ್ತಿಲಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap