ಗುಬ್ಬಿ :
ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ.
9 ನೇ ತರಗತಿಯ ಶ್ರೀನಿವಾಸ್, ದರ್ಶನ್ ಮತ್ತು 8 ನೇ ತರಗತಿಯಲ್ಲಿ ಓದುತ್ತಿದ್ದ ನಂದನ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿಗಳು.
ಎಸ್ಸಿ, ಎಸ್ಟಿ ಹಾಸ್ಟೆಲ್ ನಲ್ಲಿ ಓದುತ್ತಿದ್ದಂಹ ಈ ವಿದ್ಯಾರ್ಥಿಗಳು ಇಂದು ಮಧ್ಯಾನ ಊಟಕ್ಕೆಂದು ಹಾಸ್ಟೆಲ್ ಗೆ ಬಂದಿದ್ದು, ಊಟವನ್ನು ಮುಗಿಸಿ ಶಾಲೆಗೆ ಹೋಗದೆ ಗುಬ್ಬಿ ಕೆರೆಗೆ ಈಜಲು ಹೋಗಿದ್ದಾರೆ. ಕೆರೆ ಹೂಳು ತೆಗೆದಿದ್ದು ಆಳವಾದ ಗುಂಡಿಗಳನ್ನು ಗಮನಿಸದೆ ಮುಂದೆ ಹೋಗಿದ್ದರಿಂದ ವಾಪಸ್ಸು ಬರುವುದಕ್ಕೆ ಆಗದೆ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
