ಬೆಂಗಳೂರು :
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 32 ಆಸ್ಪತ್ರೆಗಳಲ್ಲಿನ ಬಾಣಂತಿಯರಿಗೆ ಪ್ರತಿ ದಿನ ಹಾಲು ವಿತರಣೆ ಮಾಡಲು ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಆರೋಗ್ಯ ಮುಖ್ಯ ಅಧಿಕಾರಿ ನಿರ್ಮಾಲಾ ಬುಗ್ಗಿ, ಬಾಣಂತಿಯರಿಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ 500 ಮಿಲಿ ಲೀಟರ್ ಹಾಲು ವಿತರಿಸಲು ಯೋಜನೆಯನ್ನು ಸಿದ್ಧಪಡಿಸಲಾಗಿದೆ. 15 ಲಕ್ಷ ರೂ.ಗಳನ್ನು ಯೋಜನೆಗಾಗಿ ಮೀಸಲಿಡಲಾಗಿದೆ. ಪ್ರತಿ ವರ್ಷ ಸುಮಾರು 11,000 ಹೆರಿಗೆ ಆಗಲಿವೆ ಎಂಬ ಮಾಹಿತಿಯಿದ್ದು, 30 ಸಾವಿರ ಲೀಟರ್ ಹಾಲು ಬೇಕಾಗಬಹುದು ಎಂದು ಹೇಳಿದ್ದಾರೆ.
ಇನ್ನು ಪ್ರತಿದಿನ ಆಸ್ಪತ್ರೆಯಲ್ಲಿರುವ ಬಾಣಂತಿಯರ ಸಂಖ್ಯೆ ಪಡೆದು ಹಾಲು ವಿತರಕರಿಗೆ ಎಷ್ಟು ಲೀಟರ್ ಹಾಲ ಬೇಕು, ಯಾವ ಆಸ್ಪತ್ರೆಗೆ ಹಾಲು ಬೇಕಾಗಲಿದೆ ಎಂದು ಬೇಡಿಕೆ ಸಲ್ಲಿಸಲಾಗುತ್ತದೆ. ಅದರಂತೆ ಹಾಲು ಪೂರೈಕೆ ಗುತ್ತಿಗೆದಾರರು ಹಾಲು ಪೂರೈಕೆ ಮಾಡುತ್ತಾರೆ. ಆಸ್ಪತ್ರೆ ಸಿಬ್ಬಂದಿ ಹಾಲು ಕಾಯಿಸಿ ಬಾಣಂತಿಯರಿಗೆ ವಿತರಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ