ಬಳ್ಳಾರಿ :
ಕೊರೊನೊ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಐತಿಹಾಸಿಕ ಹಂಪಿಗೆ ಪ್ರವಾಸಿಗರು ಬರುವುದನ್ನು ನಾಳೆಯಿಂದ ಒಂದು ವಾರಗಳ ಕಾಲ ನಿಷೇಧ ಹಾಕಿದ್ದು, ಸೆಕ್ಷನ್ 144 ಜಾರಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಹಂಪಿಗೆ ವಿವಿಧ ದೇಶ ಮತ್ತು ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಂದ ಕೊರೊನೊ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಹಂಪಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ವಿರುಪಾಕ್ಷ ಮೊದಲಾದ ದೇವಸ್ಥಾನಗಳಲ್ಲಿ ನಡೆಯಲಿವೆ. ಆದರೆ, ದೇವಸ್ಥಾನ ಮತ್ತು ಶಿಲ್ಪ ಕಲಾ ಸ್ಮಾರಕಗಳ ವೀಕ್ಷಣಗೆ ಟಿಕೆಟ್ ನೀಡುವುದಿಲ್ಲ. ಅಲ್ಲದೆ, ಹೊರಗಿನಿಂದ ಬರುವ ಜನರನ್ನು ಹಂಪಿ ಪ್ರವೇಶ ನಿರಾಕರಿಸಲಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
