ಬಳ್ಳಾರಿ :
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಸಮೀಪದ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‍ನಲ್ಲಿ ಹಂಪಿ ಮೃಗಾಲಯದ ಪ್ರಾಣಿಪಕ್ಷಿಗಳ ಆವರಣವನ್ನು ಇಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್ ಚಾಲನೆ ನೀಡಿದರು.
ಈ ಜೂಲಾಜಿಕಲ್ ಪಾರ್ಕ್ ಒಟ್ಟು 141.49 ಹೆಕ್ಟೆರ್ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ 11.8 ಹೆಕ್ಟೆರ್ ಮೃಗಾಲಯದ ವಿಸ್ತೀರ್ಣವಿದೆ. ಇದರಲ್ಲಿ ಕೇಂದ್ರ ಮೃಗಾಲಯ ಅನುಮೋದಿತ ಕ್ರಿಯಾಯೋಜನೆಯಲ್ಲಿ ಒಟ್ಟು 10 ಆವರಣಗಳು ನಿರ್ಮಾಣಗೊಂಡಿದ್ದು, ಇದರಲ್ಲಿ ನಾಲ್ಕು ಸಸ್ತನಿಪ್ರಾಣಿಗಳ ಆವರಣಗಳು, 5 ಮಾಂಸಹಾರಿ ಪ್ರಾಣಿಗಳ ಆವರಣಗಳು, 1 ಸರಿಸೃಪಗಳ ಆವರಣ ಹೊಂದಿದೆ.
ಈ 10 ಆವರಣಗಳಲ್ಲಿ ಚಿರತೆ, ಕರಡಿ, ಪಟ್ಟೆ ಕತ್ತೆ ಕಿರುಬ, ಗುಳ್ಳೆ ನರಿ, ಬೂದುತೋಳ, ಮೊಸಳೆ, ಕೆಂಪುಮೂತಿ ಮಂಗ, ಹನುಮಾನ್‍ಮುಸುವ, ಕಪ್ಪು ಹಂಸ, ಎಮೂ ಮತ್ತು ಇತರೆ ಪ್ರಾಣಿಪಕ್ಷಿಗಳಿವೆ. ಈ 10 ಆವರಣಗಳನ್ನು ಅಂದಾಜು 3.67 ಕೋಟಿ ಸರಕಾರದ ಅನುದಾನವನ್ನು ಉಪಯೋಗಿಸಿ ಪ್ರಾಣಿಗಳ ಆವರಣವನ್ನು ಮತ್ತು ಕೊಠಡಿಗಳನ್ನು ಕೇಂದ್ರ ಮೃಗಾಲಯ ಪ್ರಾಧಿಕಾರದ ನಿರ್ದೇಶನದ ಪ್ರಕಾರ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ್ ರೆಡ್ಡಿ, ಈ.ತುಕಾರಾಂ, ಜಿ.ಪಂ.ಉಪಾಧ್ಯಕ್ಷೆ ದೀನಾ ಮಂಜನಾಥ, ಜೂಲಾಜಿಕಲ್ ಪಾರ್ಕ್ ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷಿಣಿ, ಡಿಎಫ್ಒ ರಮೇಶಕುಮಾರ್ ಸೇರಿದಂತೆ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ