ಮಧುಗಿರಿ:
ಲೋಕ ಚುನಾವಣಾ ಫಲಿತಾಂಶದ ಹಿಂದಿನ ದಿನ ಬಾನಂಗಳದಲ್ಲಿ ಆಶ್ಚರ್ಯ ಕಂಡು ಬಂದಿದ್ದು ಈ ಘಟನೆ ಸೂತಕದ ಛಾಯೆಯೊ ಅಥವಾ ವಿಜಯದ ಮುನ್ಸೂಚನೆಯೊ ಎಂಬುದನ್ನು ಕಾದುನೋಡಬೇಕಾಗಿದೆ.
ತಾಲ್ಲೂಕಿನ ಕಸಬ ಹೋಬಳಿಯ ಸಿದ್ಧಾಪುರದ ವಾಸಿ ಹಾಗೂ ಪ್ರತ್ಯಕ್ಷ ದರ್ಶಿ ವಿಜಯ್ ಕುಮಾರ್ ಘಟನೆಯನ್ನು ಕಣ್ಣಾರೆ ಕಂಡವರಾಗಿದ್ದು, ಬುಧವಾರ ಬೆಳಗ್ಗೆ ಸುಮಾರು 5:30ರ ಸಮಯದಲ್ಲಿ ಬಾನಂಗಳದ ಪೂರ್ವ ದಿಕ್ಕಿನಲ್ಲಿ ಈ ಆಶ್ಚರ್ಯರ ಘಟನೆ ಸುಮಾರು 4 ರಿಂದ 5 ನಿಮಿಷದಲ್ಲಿ ಈ ಉಲ್ಕೆಯೂ ಹಾವಿನಾಕರದಲ್ಲಿ ಕಂಡು ಬಂದು ನಂತರ ಇದ್ದಕ್ಕಿಂದಂತೆ ಮಾಯವಾಗಿದೆ. ಇದು ಉಲ್ಕಾಪಾತ ವೆಂದು ಕೆಲವರು ಹೇಳಿತ್ತಿದ್ದರೆ ಮತ್ತೆ ಕೆಲವರು ಈ ಘಟನೆಯನ್ನು ರಾಜಕೀಯ ಲೋಕ ಫಲಿತಾಂಶಕ್ಕೆ ಇಲ್ಲದ ರೆಕ್ಕೆ ಪುಕ್ಕಗಳನ್ನು ಕಟ್ಟುತ್ತಿದ್ದಾರೆ.
ಹಾವು ಮರವೇರವುದನ್ನು ಕಂಡವರಿಗೆ ಶುಭವಾಗಲಿದೆ ಎಂಬ ಮಾತುಗಳು ಪಟ್ಟಣದಲ್ಲಿ ಕೇಳಿ ಬರುತ್ತಿವೆ. ಬಾನಂಗಳದಲ್ಲಿ ನಡೆದ ಆಶ್ಚರ್ಯ ಕರ ಘಟನೆಯು ಹಾವು ಮರವೇರುವ ರೀತಿಯಲ್ಲಿ ಹೋಲಿಸುತ್ತಿದ್ದು ಬೆಟ್ಟಿಂಗ್ ಬಾಜಿಗೂ ಬಲ ಬಂದಂತಾಗಿದೆ.
ಬಿಜೆಪಿಯ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಜಿ.ಎಸ್ ಬಸವರಾಜು ರವರಿಗೆ ಗುರುವಾರದ ಗುರು ಬಲ ಕೈಹಿಡಿಯಲಿದೆ ಎಂದರೆ ಮತ್ತೆ ಕೆಲವರು ಮಾಜಿ ಪ್ರಧಾನಿ ದೇವಗೌಡರಿಗೂ ಅನೂಕೂಲಕರವಾದ ವಾತವರಣ ಸೃಷ್ಟಿಯಾಗಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
