ಹಾಸನ :
ಜೀನ್ಸ್ ಪ್ಯಾಂಟ್ ಧರಿಸಿ ಕಚೇರಿಗೆ ಬಂದ ಪಿಡಿಓಗೆ ನೋಟಿಸ್ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆಲೂರು ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರುದ್ರೇಗೌಡ ನೋಟಿಸ್ ಪಡೆದವರು.
ಡಿಸೆಂಬರ್ 20 ರಂದು ರುದ್ರೇಗೌಡರು ಜೀನ್ಸ್ ಪ್ಯಾಂಟ್ ಮತ್ತು ಅದರ ಮೇಲೆ ಫಾರ್ಮಲ್ ಶರ್ಟ್ ಧರಿಸಿಕೊಂಡು ಜಿಲ್ಲಾಪಂಚಾಯ್ತಿ ಕಚೇರಿಗೆ ಕೆಲಸದ ನಿಮಿತ್ತ ಬಂದಿದ್ದರು. ಇದನ್ನು ಕಂಡ ಸಿಇಓ ಸರ್ಕಾರಿ ನೌಕರರಿಗೆ ಶೋಭೆ ತರುವಂತಹ ಸಭ್ಯ ವಸ್ತ್ರ ಧರಿಸದೇ ಜೀನ್ಸ್ ಪ್ಯಾಂಟ್ ತೊಟ್ಟು ಜಿಲ್ಲಾ ಪಂಚಾಯ್ತಿ ಕಚೇರಿಗೆ ಬಂದು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಿದ್ದೀರಿ. ನೋಟೀಸ್ ತಲುಪಿದ 3 ದಿನಗಳಲ್ಲಿ ಲಿಖಿತ ಸಮಜಾಯಿಷಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಸೇವಾ ನಿಯಮವಳಿ (ಸಿಸಿಎ) 1957 ರನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ಕಳುಹಿಸಿದ್ದಾರೆ.
ಈ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಟೀ ಶರ್ಟ್ ಜೊತೆಗೆ ಜೀನ್ಸ್ ಪ್ಯಾಂಟ್ ಧರಿಸಿದ್ದರೆ ಸರ್ಕಾರಿ ನೌಕರರ ವಸ್ತ್ರ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ. ಆದರೆ ಪಿಡಿಓ ರುದ್ರೇಗೌಡರು, ಜೀನ್ಸ್ ಪ್ಯಾಂಟ್ ಮತ್ತು ಮೂಮೂಲಿ ಷರಟ್ ಧರಿಸಿದ್ದರು. ಇದು ಸರ್ಕಾರಿ ನೌಕರರ ವಸ್ತ್ರ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
