ಬೆಂಗಳೂರು :
ನಾನು ತುಮಕೂರು ಲೋಕಸಭಾ ಕ್ಷೇತ್ರ ಸೇರಿದಂತೆ ಹಾಲಿ ಕಾಂಗ್ರೆಸ್ ಸಂಸದರು ಆಗ ಇದ್ದ ಕ್ಷೇತ್ರಗಳನ್ನು ನಾನು ಕೇಳಲೇ ಇಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ತಿಳಿಸಿದ್ದಾರೆ. ಈ ಸರಕಾರ ಎಷ್ಟು ದಿವಸ ಇರುತ್ತದೋ ನನಗೆ ಗೊತ್ತಿಲ್ಲ. ರಾಜಕಾರಣದಲ್ಲಿ ಏಳು ಬೀಳು ಇದ್ದೇ ಇರುತ್ತದೆ ನನ್ನ ಜೊತೆ ಇದ್ದು, ನನ್ನ ಜೊತೆ ಬೆಳೆದವರು ಇಂದು ಬಿಟ್ಟು ಹೋಗಿದ್ದಾರೆ. ಇದೀಗ ಎಲ್ಲವನ್ನು ಸಹಿಸಿಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ.
ನಾವು ಒಂದು ಮಂತ್ರಿ ಸ್ಥಾನವನ್ನೂ ಹೆಚ್ಚುವರಿಯಾಗಿ ಕಾಂಗ್ರೆಸ್‌ಗೆ ನಾವು ಬಿಟ್ಟುಕೊಟ್ಟಿದ್ದೇವೆ, ಆದರು ಕೂಡ ಕಾಂಗ್ರೆಸ್ ನಲ್ಲಿ ಬಂಡಾಯ ಶಮನವಾಗಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಲೋಕಸಭಾ ಚುನಾವಣೆ ಬಳಿಕ ಸ್ವಲ್ಪ ಶಕ್ತಿ ಕಳೆದುಕೊಂಡಿದೆ. ನಾವು ಹೇಗೋ ಸಹಿಸಿಕೊಂಡು ಹೋಗುತ್ತಿದ್ದೇವೆ, ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ದೋಸ್ತಿ ಸರ್ಕಾರದ ಭವಿಷ್ಯ ಕಾಂಗ್ರೆಸ್ ಮುಖಂಡರ ಕೈಯಲ್ಲಿದೆ ಅಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೊಸ ಬಾಂಬ್ ಸಿಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
