ಬೆಂಗಳೂರು:
ಇಂದಿನ ರಾಜಕಾರಣಕ್ಕೆ ಕುಟುಂಬ ರಾಜಕಾರಣ ಅನಿವಾರ್ಯ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ರಾಮನಗರದಲ್ಲಿ ನೀವು ರಾಜೀನಾಮೆ ನೀಡಿದರೆ ಕುಟುಂಬದವರೇ ನಿಲ್ಲಬೇಕು ಎಂದು ಅಲ್ಲಿನ ಕಾರ್ಯಕರ್ತರು ಹೇಳಿದ್ದರು. ಇದರಲ್ಲಿ ನನ್ನ ಸ್ವಾರ್ಥವೇನಿಲ್ಲ ಎಂದು ತಮ್ಮ ಪತ್ನಿ ಅನಿತಾ ರವರು ರಾಮನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಷಯಕ್ಕೆ ಸ್ಪಷ್ಟನೆ ನೀಡಿದರು.
ಈ ಉಪಚುನಾವಣೆಯು ಕುಟುಂಬ ರಾಜಕಾರಣಕ್ಕೆ ವೇದಿಕೆಯಾಗಿದೆ. 2008ರಲ್ಲಿ ನಾನು ರಾಜೀನಾಮೆ ನೀಡಿದಾಗ ಅಲ್ಲಿ ಸಾಮಾನ್ಯ ಕಾರ್ಯಕರ್ತನನ್ನೇ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದನ್ನು ಯಾರೂ ಮರೆಯಬಾರದು. ಈ ಮೊದಲು ಕೌಟುಂಬಿಕ ರಾಜಕಾರಣ ಅಂತ ನಮ್ಮ ಕುಟುಂಬದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದವರಿಗೆ ಇಂದು ಈ ಕುಟುಂಬ ರಾಜಕಾರಣ ಎಂಬ ಶಬ್ದದಿಂದ ನಾನು ತಪ್ಪಿಸಿಕೊಡಂತಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
