ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ : ದೇವೇಗೌಡ ಹಾಗೂ ಪರಮೇಶ್ವರ್ ಕೈವಾಡ !!?

ತುಮಕೂರು :

     ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಹಿಂದೆ ದೇವೇಗೌಡರು ಹಾಗೂ ಝೀರೋ ಟ್ರಾಫಿಕ್ ಕೈವಾಡವಿದೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೆಸರು ಹೇಳದೇ ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪಿಸಿದ್ದಾರೆ.

      ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಕುರಿತು ಕ್ಯಾತಸಂದ್ರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ತುಮಕೂರಿನ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತರು ಎಂಬ ಕಾರಣಕ್ಕಾಗಿ ಜೀರೋ ಟ್ರಾಫಿಕ್ ನ ಕುತಂತ್ರದ ಹಿನ್ನೆಲೆಯಲ್ಲಿ ಬ್ಯಾಂಕಿನ ಅಧಿಕಾರಿಗಳನ್ನು ಹೆದರಿಸಿ ಬರೆಸಿ ಬ್ಯಾಂಕಿನ ಸೂಪರ್ ಸೀಡ್ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಹಿಂದೆ ಝೀರೋ ಟ್ರಾಫಿಕ್ ಕೈವಾಡವಿದೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೆಸರು ಹೇಳದೇ ಆರೋಪಿಸಿದರು.  

      ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ನಾನೊಬ್ಬನೇ ಕಾರಣ ಎನ್ನುವುದು ಸುಳ್ಳು. ಜಿಲ್ಲೆಯ ಬೇರೆ ನಾಯಕರೂ ದೇವೇಗೌಡರ ಸೋಲಿಗೆ ಕಾರಣರಾಗಿದ್ದಾರೆ. ಸೋಮವಾರ ಸಂಜೆ ಈ ಸರ್ಕಾರ ಬಿದ್ದು ಹೋಗಲಿದ್ದು, ಮಂಗಳವಾರ ಅಥವಾ ಬುಧವಾರದೊಳಗೆ ನಾನು ಮತ್ತೆ ಅಧಿಕಾರ ಹಿಡಿಯುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Image result for parameshwar hd revann

     ಇನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಸಚಿವ ರೇವಣ್ಣ ಅವರ ಅವ್ಯಹಾರವನ್ನು ಕೆಲವೇ ದಿನಗಳಲ್ಲಿ ಬಿಚ್ಚಿಡುತ್ತೇನೆ. ರೇವಣ್ಣ ಕೆಎಂಎಫ್ ನಲ್ಲಿ ಸಾಕಷ್ಟು ಹಗರಣ ನಡೆಸಿದ್ದಾರೆ. ಪರಮೇಶ್ವರ್ ಒಡೆತನದ ಸಿದ್ದಾರ್ಥ ವಿದ್ಯಾಸಂಸ್ಥೆಗಳಲ್ಲಿ ಸಾಕಷ್ಟು ಹಗರಣ ನಡೆದಿವೆ. ಬೇಗೂರು ಬಳಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪಡೆದು ಬ್ಯಾಂಕ್ ಕಾಲೇಜು ನಿರ್ಮಾಣ ಮಾಡಿದ್ದಾರೆ. ಈ ಜಾಗ ವಿಚಾರದಲ್ಲಿ ಹೈಕೋರ್ಟ್ ಗೂ ವಂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರೆಲ್ಲರ ಬಗ್ಗೆ ತನಿಖೆ ನಡೆಸುವಂತೆ ಮಾಡ್ತೇನೆ. ಎಂದು ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ರೇವಣ್ಣರಿಗೆ ಟಾಂಗ್ ನೀಡಿದರು.

      ಇನ್ನು ಕೇವಲ 3-4 ದಿನಗಳು ಮಾತ್ರ. 10 ದಿನದ ಒಳಗಾಗಿ ಈ ಆದೇಶವನ್ನು ರದ್ದುಗೊಳಿಸಿ ಮತ್ತೊಮ್ಮೆ ನಾವು ಅಧಿಕಾರದಲ್ಲಿ ಮುಂದುವರಿಯುತ್ತೇವೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದವರು ತಿಳಿಸಿದರು.

ಪ್ರತಿಭಟನೆ ಬೇಡ :

      ಡಿಸಿಸಿ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಿಲ್ಲೆಯಾದ್ಯಂತ ಜನರು ಹಾಗೂ ಅಭಿಮಾನಿಗಳು ಹಾಗೂ ಬ್ಯಾಂಕಿನ ಅಧಿಕಾರಿಗಳು ಸಿಬ್ಬಂದಿಗಳು ಪ್ರತಿಭಟನೆ ಮಾಡುವುದು ಬೇಡ. ಕಾನೂನುಗಳನ್ನು ಗಾಳಿಗೆ ತೂರಿ ರಾಜಕೀಯ ಆದೇಶ ನೀಡಲಾಗಿದೆ. ಬ್ಯಾಂಕ್‌ಗೆ ಸಂಬಂಧಿಸಿದಂತೆ ನೌಕರರು, ಅಧಿಕಾರಿಗಳು ಪ್ರತಿಭಟನೆ ಮಾಡುವುದಾದರೆ ಒಂದು ಗಂಟೆ ಹೆಚ್ಚು ಸಮಯ ಕೆಲಸ ಮಾಡಿ ಬ್ಯಾಂಕ್ಗಳಲ್ಲಿ ಅದರ ಮೂಲಕ ತಮ್ಮ ಪ್ರತಿಭಟನೆಯನ್ನು ಹೊರಹಾಕಿ ಎಂದವರು ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap