ಮೈಸೂರು:
ಎಲ್ಲ ವಿಚಾರಗಳನ್ನು ಭಾವನಾತ್ಮಕವಾಗಿ ನೋಡುತ್ತೇನೆ. ನಾನೇನು ಮೊಸಳೆ ಕಣ್ಣೀರು ಹಾಕಿ ನಾಟಕ ಮಾಡುವುದಿಲ್ಲ. ‘ನಾನೊಬ್ಬ ಭಾವನಾತ್ಮಕ ಜೀವಿ’ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮೈಸೂರಿನಲ್ಲಿ ಚುನಾವಣಾ ಪ್ರಚಾರದ ಮಾತನಾಡುತ್ತಿದ್ದ ಅವರು, ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಹೇಳಿದ್ದರೂ ಸಹ, ಈ ಭೂಮಿ ಮೇಲೆ ಬದುಕಿರುವವರೆಗೆ ಜನರ ಸೇವೆ ಮಾಡುವುದಾಗಿ ತಿಳಿಸಿದ ಅವರು, ‘ನನ್ನ ಆರೋಗ್ಯಕ್ಕಿಂತ ಜನರ ಆರೋಗ್ಯ ಮುಖ್ಯ’ ಸಾಯುವವರೆಗೂ ಸಿಎಂ ಆಗಿರುತ್ತೇನೆ ಎಂದುಕೊಂಡಿಲ್ಲ. ಜನಸೇವೆಯೇ ನನ್ನ ಗುರಿ ಎಂದರು. ಎಂದರು.
ಜೆಡಿಎಸ್‌ನಲ್ಲಿ ಮಾತ್ರ ಅಪ್ಪ-ಮಕ್ಕಳು ಹಾಗೂ ಅಣ್ಣ-ತಮ್ಮಂದಿರು ಇರೋದಾ?.. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ವಾ ಎಂದು ಖಾರವಾಗಿ ಪ್ರಶ್ನಿಸಿರುವ ಮುಖ್ಯಮಂತ್ರಿ, ಶಿವಮೊಗ್ಗದಲ್ಲಿ ಬಿಎಸ್‌ವೈ ಪುತ್ರ ಬಿಟ್ಟು ಬೇರೆ ಅಭ್ಯರ್ಥಿಯೇ ಇಲ್ವಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಜರಿದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ