ಶಾಕಿಂಗ್ ನ್ಯೂಸ್ : ‘ಆನ್ ಲೈನ್’ ಮದ್ಯ ಮಾರಾಟಕ್ಕೆ ಬಿತ್ತು ಬ್ರೇಕ್!!

ಬೆಂಗಳೂರು:

      ಮದ್ಯಪ್ರಿಯರಿಗೆ ಹೈಕೋರ್ಟ್ ಶಾಕಿಂಗ್ ನ್ಯೂಸ್ ನೀಡಿದ್ದು, ಆನ್ ಲೈನ್ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

       ಆನ್ ಲೈನ್ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತಾದರೂ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರಿಂದ ಹಿಂದೆ ಸರಿದಿತ್ತು. ಇದರ ಮಧ್ಯೆ ಚೆನ್ನೈ ಮೂಲದ ಹಿಪ್ ಬಾರ್ ಪ್ರೈವೇಟ್ ಲಿಮಿಟೆಡ್, ಡಿಜಿಟಲ್ ವಾಲೆಟ್ ಮೂಲಕ ಆನ್ ಲೈನ್ ಲಿಕ್ಕರ್ ವೆಡಿಂಗ್ ಗೆ ಅನುಮತಿ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

      ಇದೀಗ ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ಪೀಠ, ಆನ್ ಲೈನ್ ಮೂಲಕ ಮದ್ಯ ಸರಬರಾಜು ಮಾಡುವುದು ಅಕ್ರಮ ಹಾಗೂ ಅಬಕಾರಿ ನಿಯಮಗಳಡಿ ಅದಕ್ಕೆ ಅವಕಾಶವೂ ಇಲ್ಲ ಎಂದು ತೀರ್ಪು ನೀಡಿದೆ. ಆನ್ ಲೈನ್ ಮದ್ಯಮಾರಾಟದಿಂದ ಅಪ್ರಾಪ್ತರು ಮದ್ಯಪಾನದ ಚಟಕ್ಕೆ ದಾಸರಾಗುವ ಯುವಪೀಳಿಗೆಯ ನಿಯಂತ್ರಣ ಸಾಧ್ಯವಿಲ್ಲ ಎಂದೂ ಅಭಿಪ್ರಾಯಪಟ್ಟಿದೆ.

       ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಲೈಸೆನ್ಸ್ ಹೊಂದಿರುವವರು ಮಾತ್ರ ನಿಗದಿಪಡಿಸಿದ ಸಮಯದಲ್ಲಿ ಮದ್ಯವನ್ನು ಮಾರಾಟ ಮಾಡಬಹುದಾಗಿದ್ದು, ಆದರೆ ಆನ್ ಲೈನ್ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ದಿನದ 24 ಗಂಟೆಯೂ ವಹಿವಾಟು ನಡೆಸಬಹುದಾಗಿದೆ. ಹಾಗಾಗಿ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap