ಕೊಪ್ಪಳ:
ಮನೆಯ ಮೇಲ್ಚಾವಣಿ ಕುಸಿದುಬಿದ್ದು ಮೂವರು ಮಕ್ಕಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಕೊಪ್ಪಳ ತಾಲೂಕೊನ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸುಜಾತ(22), ಅಮರೇಶ(18) ಹಾಗೂ ಗವಿಸಿದ್ದಪ್ಪ(15) ಎಂದು ಗುರುತಿಸಲಾಗಿದ್ದು, ಬುಧವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಅಕ್ಕ ಹಾಗೂ ಇಬ್ಬರು ತಮ್ಮಂದಿರು ಮೃತಪಟ್ಟಿದ್ದಾರೆ.
ಸಾವಿನ ದವಡೆಯಿಂದ ತಂದೆ ಸೋಮಣ್ಣ ಕುದುರಿಮೋತಿ ಪಾರಾಗಿದ್ದು, ಕಣ್ಣೆದುರಲ್ಲೇ ಮೃತಪಟ್ಟ ಮಕ್ಕಳನ್ನು ನೋಡಿ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ