ಪಶುವೈದ್ಯೆ ಅತ್ಯಾಚಾರ : ಕನ್ನಡಿಗನಿಂದಲೇ ಆರೋಪಿಗಳ ಎನ್‌ಕೌಂಟರ್‌

ಹೈದರಾಬಾದ್: 

     ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ ಕಾರ್ಯಾಚರಣೆಯ ಹಿಂದಿರುವ ವ್ಯಕ್ತಿ ಕನ್ನಡಿಗರಾದ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನರ. ‌

      ಹೌದು, ಹೈದರಾಬಾದ್​ ಪಶುವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಿ ಎನ್ನುವ ಕೂಗು ಕೇಳಿ ಬರುತ್ತಿರುವಾಗಲೇ, ನಾಲ್ಕೂ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ. ಎನ್​ಕೌಂಟರ್​ ಮಾಡಿದ ಪೊಲೀಸ್​ ಆಯುಕ್ತರು ಹುಬ್ಬಳ್ಳಿ ಮೂಲದವರು ಎನ್ನುವುದೇ ಒಂದು ಹೆಮ್ಮೆಯ ವಿಷಯವಾಗಿದೆ.

ಪಶುವೈದ್ಯೆ ಅತ್ಯಾಚಾರ ಪ್ರಕರಣ : ಅತ್ಯಾಚಾರವೆಸಗಿದ್ದ ಸ್ಥಳದಲ್ಲೇ ಹಂತಕರು ಎನ್’ಕೌಂಟರ್!!!

      ಹುಬ್ಬಳ್ಳಿಯ ವಿಶ್ವನಾಥ್ ಸಜ್ಜನರ್ ಸೈಬರಾಬಾದ್​ನಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಶುವೈದ್ಯಯನ್ನು ಅತ್ಯಾಚಾರ, ಕೊಲೆ ಮಾಡಿದ ಆರಿಫ್, ಶಿವ, ಚನ್ನಕೇಶವಲು ನವೀನ್‌ನನ್ನು ವಿಶ್ವನಾಥ್​ ಅವರೇ ವಿಚಾರಣೆ ನಡೆಸುತ್ತಿದ್ದರು. ಇಂದು ಬೆಳಗ್ಗೆ ವಿಶ್ವನಾಥ್​ ಆಯಂಡ್​ ಟೀಂ ಕೊಲೆ ನಡೆದ ಜಾಗಕ್ಕೆ ಆರೋಪಿಗಳನ್ನು ಮಹಜರಿಗೆ ಕರೆದೊಯ್ದಿದ್ದರು.

      ಶಾದ್‌ನಗರದ ಚಟಾನ್‌ಪಲ್ಲಿ ಬ್ರಿಡ್ಜ್‌ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಲ್ವರು ಅತ್ಯಾಚಾರಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನ್ಯಾಷನಲ್​ ಹೈವೇ 44ನಲ್ಲಿ ಘಟನೆ ನಡೆದಿದೆ. ಬೆಳಗ್ಗಿನ ಜಾವ 3.30ಕ್ಕೆ ನಾಲ್ವರು ಅತ್ಯಾಚಾರಿಗಳ ಎನ್​ಕೌಂಟರ್​ ಮಾಡಲಾಗಿದೆ. 

      ಕರ್ನಾಟಕದ ಗದುಗಿನವರಾದ ವಿಶ್ವನಾಥ್‌ ಅವರು ಈ ಹಿಂದೆ ತೆಲಂಗಾಣದ ವಾರಂಗಲ್‌ನಲ್ಲಿ ವಿವಾಹಿತ ಮಹಿಳೆಯ ಮೇಲೆ ಆಟೋ ಚಾಲಕ ಆಯಸಿಡ್ ದಾಳಿ ನಡೆಸಿದ ಪ್ರಕರಣದ ಆರೋಪಿಯನ್ನು ಎನ್‌ಕೌಂಟರ್‌ ಮಾಡಿದ್ದರು.

     ಆರೋಪಿಗಳನ್ನು ಬೇಟೆಯಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ