ಹುಬ್ಬಳ್ಳಿ : ಭಯೋತ್ಪಾದಕ ಸಂಘಟನೆ ನಂಟು ಹೊಂದಿದ್ದ ವ್ಯಕ್ತಿ ಬಂಧನ!!

ಹುಬ್ಬಳ್ಳಿ:

      ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಜತೆ ನಂಟು ಹೊಂದಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿಯನ್ನು ಐಎಸ್ ಡಿ ಪೊಲೀಸರು ಬಂಧಿಸಿದ್ದಾರೆ. 

      ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಲಘುಸ್ಫೋಟ ಪ್ರಕರಣ ಸಂಭವಿಸಿದ ಮರುದಿನವೇ ಈ ಕುರಿತ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಜತೆ ನಂಟು ಹೊಂದಿರುವ ಆರೋಪ ಮೇಲೆ ಮಹಮ್ಮದ್ ಜಾಫರ್​ ಸಾದಿಕ್ ಎಂಬಾತನನ್ನು ಬಂಧಿಸಿದ್ದಾರೆ.

      ಈತ ಇಲ್ಲಿಯ ರೈಲ್ವೆ ಕಾರ್ಯಾಗಾರದ ನೌಕರನಾಗಿದ್ದು, ಕೆಲ ವರ್ಷಗಳ ಹಿಂದೆ ಸಿಮಿ ಸೇರಿ ದೇಶವಿರೋಧಿ ಸಂಘಟನೆ ಜತೆ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ಉತ್ತರ ಪ್ರದೇಶದ ಹಿಂದು ಮುಖಂಡ ಕಮಲೇಶ ತಿವಾರಿ ಹತ್ಯೆ ಪ್ರಕರಣದಲ್ಲಿ ಐಎಸ್​ಡಿ ಪೊಲೀಸರಿಗೆ ಬೇಕಾಗಿದ್ದ. ಹಾಗಾಗಿ, ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಐಎಸ್​ಡಿ ವಶಕ್ಕೆ ಒಪ್ಪಿಸಿದೆ. 

      ನಿನ್ನೆ ಮಧ್ಯಾಹ್ನ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅಮರಾವತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ನಿಂಬೆಹಣ್ಣು ಗಾತ್ರದ ಸ್ಫೋಟಕ ದಿಢೀರನೆ ಸಿಡಿದಿತ್ತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ರೈಲ್ವೆ ನಿಲ್ದಾಣದ ಉದ್ಯಾನವನದಲ್ಲಿ ಇಟ್ಟಿದ್ದ ಬಾಕ್ಸ್ ಮಾದರಿಯ ಸ್ಫೋಟವನ್ನು ಸಹ ಪತ್ತೆ ಹಚ್ಚಿದ್ದರು. ಇದು ಜನರಲ್ಲಿನ ಆತಂಕಕ್ಕೆ ಕಾರಣವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap