ಹುಬ್ಬಳ್ಳಿ-ವಿಜಯಪುರ ವಾಹನ ಸಂಚಾರ ಸಂಪೂರ್ಣ ಸ್ಥಗಿತ!!

ಹುಬ್ಬಳ್ಳಿ :

      ರಾಜ್ಯದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದ್ದು, ಮಲಪ್ರಭೆ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೊಣ್ಣುರ ಹೊಸ ಸೇತುವೆ ಮುಳುಗಿದ ಪರಿಣಾಮ ಹುಬ್ಬಳ್ಳಿ-ವಿಜಯಪುರ ನಡುವಿನ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

      ಮಹಾರಾಷ್ಟ್ರದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ರೋಣ, ನರಗುಂದ ತಾಲೂಕುಗಳಲ್ಲಿ 10 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದ್ದು, ಮತ್ತೆ ಪ್ರವಾಹ ಭೀತಿ ಆವರಿಸಿದೆ. ತಿಂಗಳೊಳಗೆ ಮತ್ತೆ ಎದುರಾಗಿರುವ ನೆರೆ ಆಘಾತ ಸಂತ್ರಸ್ತರನ್ನು ಕಂಗಾಲಾಗಿಸಿದೆ. ಕೊಣ್ಣೂರು ಬಳಿ ಸೇತುವೆ ಮುಳುಗಡೆ ಆತಂಕ ಉಂಟಾಗಿರುವುದರಿಂದ ಹುಬ್ಬಳ್ಳಿ ವಿಜಯಪುರ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

     ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿನ ಭಾರೀ ಮಳೆಯಿಂದಾಗಿ ಕೃಷ್ಣ, ಘಟಪ್ರಭಾ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಪ್ರಮುಖ ಸೇತುವೆಗಳು ಮುಳುಗಡೆಯಾಗಿವೆ. ನರಗುಂದ ತಾಲೂಕಿನಲ್ಲೂ ಮಲಪ್ರಭೆ ಉಕ್ಕಿ ಹರಿಯುತ್ತಿದೆ. ಲಕಿಮಾಪುರ ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಅಮರಗೊಳ, ಕುರುವಿನಕೊಪ್ಪ ಗ್ರಾಮಸ್ಥರು ಸ್ಥಳಾಂತರಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap