ಬೆಂಗಳೂರು:
ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಹಾಹದಿಂದ ಉಂಟಾದ ಭೀಕರ ಭೂ ಕುಸಿತಕ್ಕೆ ಮಾನವ ನಿರ್ಮಿತ ಲೋಪಗಳೇ ಕಾರಣ ಎಂದು ಹೈದರಾಬಾದ್‍ನ ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜತೆಗೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂ ಕಂಪನ ಉಂಟಾಗಿದೆ. ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಭಾರೀ ಮಾರ್ಪಾಡಾಗಿದ್ದು, ಇದರಿಂದ ನೀರಿನ ಸಹಜ ಹರಿವಿಗೆ ಅಡಚಣೆ ಉಂಟಾಗಿದೆ. ಇದರ ಪರಿಣಾಮ ಭೂ ಕುಸಿತವಾಗಿದೆ ಎಂದು ಎಂದು ಭೂ ವಿಜ್ಞಾನಿಗಳು ತಮ್ಮ 500 ಪುಟಗಳ ಸಮಗ್ರ ವರದಿಯನ್ನು ಕೊಡುಗ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರಿಗೆ ಸಲ್ಲಿಸಿದ್ದಾರೆ.
ರಸ್ತೆ, ಮನೆ, ರೆಸಾರ್ಟ್, ಹೋಟೆಲ್, ಹೋಂಸ್ಟೇಗಳ ನಿರ್ಮಾಣಕ್ಕೆ ಬೆಟ್ಟಗಳನ್ನು ಮನಸ್ಸೋ ಇಚ್ಚೆ ಅಗೆಯಲಾಗಿದೆ. ಇದರಿಂದ ನೀರು ಹರಿಯಲು ಅಡ್ಡಿಯಾಗಿದೆ. ಭೂಮಿಯೊಳಗಿನ ದೋಷಪೂರಿತ ವಲಯವೂ ಭೂ ಕುಸಿತಕ್ಕೆ ಕಾರಣ ಎಂದು ಹೇಳಿದೆ.
ಹೈದ್ರಾಬಾದಿನ ಜೀಯೋಲಾಜಿಕಲ್ ಸರ್ವೆ ಆಫ್ ಇಂಡಿಯ ವಿಜ್ಞಾನಿಗಳು ಕಳೆದ ತಿಂಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಜತೆಗೆ ಭವಿಷ್ಯದ ಅನಾಹುತ ತಡೆಯಲು ಹಲವು ಮಾರ್ಗಸೂಚಿಗಳನ್ನು ಜಾರಿಗೆ ತರುವಂತೆ ಸೂಚಿಸಿದೆ. ಭೂ ಬಳಕೆ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು.
ಜತೆಗೆ ರಸ್ತೆ, ಪಟ್ಟಣ, ಅಭಿವೃದ್ಧಿ ಯೋಜನೆ ಬದಲಾಯಿಸುವಂತೆ ಸಲಹೆ ನೀಡಲಾಗಿದ್ದು, ರಚನಾತ್ಮಕ ಯೋಜನೆಗಳ ಜಾರಿಗೆ ತಜ್ಞ ಎಂಜಿನಿಯರ್ ಗಳ ಸಲಹೆ ಪಡೆಯುವಂತೆ ವರದಿ ಸಲಹೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ