ಹುಬ್ಬಳ್ಳಿ :
ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡಿ ಮತ್ತೆ ಸಿಎಂ ಆದರೆ ಅವರ ಮನೆ ಮುಂದೆ ಡ್ರೆಸ್ ಹಾಕಿ ವಾಚ್ ಮನ್ ಕೆಲಸ ಮಾಡುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯ ನಂತರ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂಬ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹ್ಮದ್, ಬಿಎಸ್ ವೈಗೆ ಮೇ. 25 ರ ವರೆಗೆ ಗಡುವು ಕೊಡುತ್ತೇನೆ. ಅವರು ಪ್ರಮಾಣ ವಚನ ಸ್ವೀಕಾರ ಮಾಡಿ ಸಿಎಂ ಆದರೆ ಅವರ ಮನೆ ಮುಂದೆ ಡ್ರೆಸ್ ಹಾಕಿ ವಾಚ್ ಮನ್ ಕೆಲಸ ಮಾಡುತ್ತೇನೆ. ಒಂದು ವೇಳೆ ಬಿಎಸ್ ವೈ ಸಿಎಂ ಸಿಎಂ ಆಗದಿದ್ದರೆ ಏನು ಮಾಡುತ್ತಾರೆ ಅವರನ್ನೇ ಕೇಳಿ, ನನ್ನ ಸವಾಲನ್ನು ಅವ್ರು ಸ್ವೀಕಾರ ಮಾಡುತ್ತಾರಾ ಎಂಬುದನ್ನು ಹೇಳಲಿ ಎಂದರು.
ಚುನಾವಣೆಯ ನಂತರವೂ ಯಾವುದೇ ಬದಲಾವಣೆಯಾಗುವುದಿಲ್ಲ. ಒಂದು ವೇಳೆ ಬಿಜೆಪಿ ಸರ್ಕಾರ ರಚನೆ ಮಾಡಿದರೆ, ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದೂ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳುವವರು ಅವರ ಚಮಚಾಗಳು ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ ಸಚಿವ ಜಮೀರ್, ನಾವ್ಯಾರೂ ಸಿದ್ದರಾಮಯ್ಯ ಅವರ ಚಮಚಾಗಳಲ್ಲ, ನಾವು ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಗಳು. ಈ ಬಾರಿ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹೇಳಿಲ್ಲ. ಮುಂದಿನ ಬಾರಿ ಸಿದ್ದರಾಮಯ್ಯ ಸಿಎಂ ಆಗಲಿ ಎಂಬುದಷ್ಟೇ ನಮ್ಮ ಆಸೆ. ಈಶ್ವರಪ್ಪ ಹಾಗೂ ಬಿಜೆಪಿಯವರಿಗೆ ಚಮಚಾಗಿರಿ ಮಾಡಿ ಅಭ್ಯಾಸ ಇದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ