ವಿಜಯಪುರ : ಅಕ್ರಮ ಸಂಬಂಧ ; ಇಬ್ಬರ ಬರ್ಬರ ಹತ್ಯೆ!!

ವಿಜಯಪುರ :

     ವಿವಾಹಿತೆಯೊಬ್ಬಳು ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ತಾಲೂಕಿನಲ್ಲಿ ಅಲಿಯಾಬಾದ್ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.

     ಅಮರನಾಥ್ ಸೊಲ್ಲಾಪುರ (25), ಸುನಿತಾ ತಳವಾರ (35) ಹತ್ಯೆಯಾದವರು. ಸುನಿತಾ ಅವರ ಪತಿ ವರ್ಷಗಳ ಹಿಂದೆ ಸಾವಿಗೀಡಾಗಿದ್ದರು. ನಂತರ‌ ಸುನೀತಾ ಅವರೊಂದಿಗೆ ಯುವಕನೋರ್ವ ಅನೈತಿಕ ಸಂಬಂಧ ಹೊಂದಿದ್ದನು.
ಮಂಗಳವಾರ ರಾತ್ರಿ ಅಮರನಾಥ್ ಹಾಗೂ ಸುನೀತಾ ತೋಟದ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಸುನಿತಾರ ತಂದೆ ರಾಮಗೊಂಡ ಮತ್ತು ಅವರ ಅಪ್ರಾಪ್ತ ಮಗನಿಗೆ ಸಿಕ್ಕಿಬಿದಿದ್ದರು.

      ಇದರಿಂದ ಸುನಿತಾ ತಂದೆ ಮತ್ತು ಅಪ್ರಾಪ್ತ ಮಗ ಕೋಪಗೊಂಡಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಇಬ್ಬರನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. 

     ಸದ್ಯ ಪೊಲೀಸರು ರಾಮಗೊಂಡ ಹಾಗೂ ಅವರ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap