ತುಮಕೂರು :
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ವ್ಯಾಪಕ ಅಕ್ರಮ ಮರಳು ಸಾಗಾಣಿಕೆ ಸದ್ದು ಮಾಡಿದ್ದು, ಅಕ್ರಮ ಮರಳು ಸಾಗಾಣಿಕೆ ತಡೆಯುವಲ್ಲಿ ತಾಲ್ಲೂಕ್ ಅಡಳಿತ ಸಂಪೂರ್ಣ ವಿಫಲವಾಗಿದೆ.
ಸರ್ಕಾರದ ಆದೇಶಕ್ಕೆ ಕವಡೆ ಕಿಮ್ಮತ್ ನೀಡದೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ತಾಲ್ಲೂಕು ಮರಳು ಸವಿುತಿಯ ಸದಸ್ಯ ಕಾರ್ಯದರ್ಶಿ ಕೊರಟಗೆರೆ ತಹಶೀಲ್ದಾರ್, ತಾಲ್ಲೂಕು ಮರಳು ಸವಿುತಿಯನ್ನು ಸಂಪೂರ್ಣ ನಿಷ್ಕ್ರಿಯ ಗೊಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ