IMA ಜ್ಯೂವೆಲ್ಸ್ ಹಗರಣ : ಡಿಐಜಿ ರವಿಕಾಂತೇಗೌಡ ನೇತೃತ್ವದಲ್ಲಿ SIT ತನಿಖೆ!!

ಬೆಂಗಳೂರು :

      ಐಎಂಎ ಜುವೆಲ್ಲರಿ ಹಗರಣಕ್ಕೆ ಸಂಬಂಧಿಸಿದಂತೆ ಡಿಐಜಿ ಬಿ.ಆರ್. ರವಿಕಾಂತೇಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

       ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಈ ಕುರಿತು ಮಾಹಿತಿ ನೀಡಿದ್ದು, ಈಗಾಗಲೇ ಘೋಷಿಸಿದಂತೆ ಐಎಂಎ ಜ್ಯುವೆಲ್ಸ್ ಪ್ರಕರಣದ ತನಿಖೆಗೆ ಡಿಐಜಿ ಬಿ ಆರ್ ರವಿಕಾಂತೇಗೌಡರ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

      ಅಪರಾಧ ವಿಭಾಗದ ಡಿಸಿಪಿ ಎಸ್‌ ಗಿರೀಶ್‌, ಬೆಂಗಳೂರು ಸಿಟಿ ಸಿಸಿಬಿ ವಿಭಾಗ ಎಸಿಪಿ ಬಾಲರಾಜು, ಬೆಂಗಳೂರು ಸಿಐಡಿ ವಿಭಾಗದ ಡಿವೈಎಸ್‌ಪಿ ಕೆ ರವಿಶಂಕರ್‌, ರಾಜ್ಯ ಗುಪ್ತಚರ ದಳದ ಡಿವೈಎಸ್‌ಪಿ ರಾಜಾ ಇಮಾಮ್‌ ಕಾಸಿಮ್‌, ಕರ್ನಾಟಕ ಲೋಕಾಯುಕ್ತ ವಿಭಾಗದ ಎಸ್‌ಐಟಿಯ ಡಿವೈಎಸ್‌ಪಿ ಅಬ್ದುಲ್‌ ಖಾದರ್‌, ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಿ.ಆರ್‌. ಗೀತಾ, ಬೆಂಗಳೂರು ಬಿಡಿಎ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಲ್‌ ವೈ ರಾಜೇಶ್‌, ಸಿಸಿಬಿ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಂಜನ್‌ ಕುಮಾರ್‌, ಎಸ್‌ಸಿಆರ್‌ಬಿಯ ಇನ್‌ಸ್ಪೆಕ್ಟರ್‌ ಎನ್‌ ತನ್ವೀರ್‌ ಅಹ್ಮದ್‌ ಹಾಗೂ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಕೆ ಶೇಖರ್‌ ಎಸ್‌ಐಟಿಯಲ್ಲಿದ್ದಾರೆ.

      ಐಎಂಎ ಜ್ಯುವೆಲ್ಸ್ ಬಹುಕೋಟಿ ವಂಚನೆ ಪ್ರಕರಣ, ಕಳೆದ ನಿನ್ನೆಯಷ್ಟೇ ಬೆಳಕಿಗೆ ಬಂದಿದ್ದರೂ, ಗ್ರಾಹಕರಿಗೆ ಮೋಸ ಮಾಡಿದ ಹಣ ಕೋಟಿ ಕೋಟಿ ದಾಟುತ್ತಿದೆ. ಈ ಬಗ್ಗೆ ಗ್ರಾಹಕರಿಂದ ದೂರು ಸ್ವೀಕರಿಸಲು ವಿಶೇಷ ಸೌಲಭ್ಯ ಕಲ್ಪಿಸಿರುವ ಪೊಲೀಸರು, ವಂಚನೆಗೆ ಒಳಗಾದವರಿಂದ ದೂರನ್ನು ಸ್ವೀಕರಿಸುತ್ತಿದ್ದಾರೆ.

      ಇದರ ಬೆನ್ನಲ್ಲೇ ಈ ಪ್ರಕರಣವನ್ನು ಎಸ್‌ಐಟಿ ಪೊಲೀಸರಿಗೆ ನಿನ್ನೆಯಷ್ಟೇ ವಹಿಸಿದ್ದ ಪೊಲೀಸ್ ಇಲಾಖೆ, ಇಂದು ಡಿಐಜಿ ಬಿಆರ್ ರವಿಕಾಂತೇಗೌಡರ ನೇತೃತ್ವದ ವಿಶೇಷ ತನಿಖಾ ದಳವನ್ನು ರಚನೆ ಮಾಡಿ, ತನಿಖೆ ನಡೆಸುವಂತೆ DG & IGP ನೀಲಮಣಿ ಎನ್ ರಾಜು ಆದೇಶ ಹೊರಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap