IMA ಜ್ಯೂವೆಲ್ಸ್ ನಿಂದ 400 ಕೋಟಿ ಮೋಸ : ಮಾಲೀಕ ನಾಪತ್ತೆ!!

ಬೆಂಗಳೂರು:

      ಶಿವಾಜಿ ನಗರದ ಪ್ರತಿಷ್ಠಿ ತಐಎಂಎ ಜ್ಯುವೆಲರಿಯಲ್ಲಿ ಹಣ ಹೂಡಿಕೆ ಮಾಡಿರುವ ಸಾವಿರಕ್ಕೂ ಹೆಚ್ಚು ಜನರಿಗೆ ಬರೋಬ್ಬರಿ 400ಕೋಟಿಯಷ್ಟು ಹಣ ಮೋಸವಾಗಿದೆ ಎನ್ನಲಾಗಿದೆ.

      ಆಭರಣ ಮಳಿಗೆ ಮಾಲೀಕ ಮೊಹಮ್ಮದ್ ಮನ್ಸೂರ ಖಾನ್, ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ನಗರ ಪೊಲೀಸ್ ಕಮಿಷನರ್ ಅವರಿಗೆ ಆಡಿಯೋ ಕಳಿಸಿದ್ದು, ಅದರಲ್ಲಿ ‘ಶಿವಾಜಿನಗರ ಶಾಸಕ 400 ಕೋಟಿ ಹಣ ಪಡೆದು ವಾಪಸ್ ಕೊಟ್ಟಿಲ್ಲ. ಹಣ ವಾಪಸ್ ಕೇಳಿದಾಗ ರೌಡಿಗಳನ್ನು ಕಳಿಸಿ ಬೆದರಿಸಿದ್ದಾರೆ. ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇರೋದ್ರಿಂದ ಹಳ್ಳಿಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದೇನೆ. ನೀವು ಈ ಆಡಿಯೋ ಕೇಳೋ ಹೊತ್ತಿಗೆ ನಾನು ಈ ಲೋಕದಲ್ಲಿ ಇರೊಲ್ಲ, ಎಂದು ತಿಳಿಸಿದ್ದಾರೆ.

      ಆಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಆವರಣ ಮಳಿಗೆಯಲ್ಲಿ ಹೂಡಿಕೆ ಮಾಡಿದ್ದ ಜನರು ಮಳಿಗೆ ಎದುರು ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಮಳಿಗೆಗೆ ಸದ್ಯ ಬೀಗ ಜಡಿಯಲಾಗಿದೆ.

      ಸ್ಥಳದಲ್ಲಿ ಶಿವಾಜಿನಗರ ಪೊಲೀಸರು ಹಾಗೂ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಬೀಡು ಬಿಟ್ಟಿದ್ದು, ಹೂಡಿಕೆದಾರರಿಂದ ದೂರನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಇನ್ನು ನಾಪತ್ತೆಯಾಗಿರುವ ಐಎಂಎ ಜ್ಯುವೆಲರಿಯ ಮಾಲೀಕ ಮನ್ಸೂರ್‌ ಖಾನ್‌ನನ್ನು ಹುಡುಕುವುದಕ್ಕಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದು ಎಲ್ಲ ಕಡೆ ಹುಡುಕಾಟ ನಡೆಸಿದ್ದು ಇಲ್ಲಿ ತನಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap