IMA ವಂಚನೆಗೊಳಗಾದವರಿಗೆ ಹಣ ವಾಪಾಸಾತಿಗೆ ಪ್ರಕ್ರಿಯೆ ಆರಂಭ!!

ಬೆಂಗಳೂರು : 

     ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಹಣ ಕಳೆದುಕೊಂಡಿರುವರು ಡಿ.24ರ ಒಳಗಾಗಿ ಆನ್ ಲೈನ್ ಮೂಲಕ ಹಣ ವಾಪಾಸ್ ಪಡೆಯಲು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

       ಈ ಕುರಿತಂತೆ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯಾದಂತ ಹರ್ಷಗುಪ್ತಾ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಐಎಂಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರು ಕ್ಲೇಮು ಅರ್ಜಿಗಳ ಸ್ವೀಕೃತಿಯು ದಿನಾಂಕ 25-11-2020ರಿಂದ ಪ್ರಾರಂಭವಾಗಲಿದ್ದು, ಕ್ಲೇಮು ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದ ದಿನಾಂಕದಿಂದ ಒಂದು ತಿಂಗಳಲ್ಲಿ ಅಂದರೆ ದಿನಾಂಕ 24-12-2020ರೊಳಗಾಗಿ ಸಲ್ಲಿಸಬಹುದಾಗಿರುತ್ತದೆ. ತದ ನಂತ್ರ ಯಾವುದೇ ಕ್ಲೇಮು ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

     ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ ಕೂಡ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ 080-46885959ಗೂ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

      ಪ್ರಸ್ತುತ ಸಂದರ್ಭದಲ್ಲಿ ಐಎಂಎ ಮುಖ್ಯಸ್ಥ ಮನ್ಸೂರ್ ಆಲಿಖಾನ್ ಇತರ ಅಧಿಕಾರಿಗಳು ಮತ್ತು ಅವ್ಯವಹಾರದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿ ಠೇವಣಿದಾರರಿಗೆ ಹಣ ವಾಪಸ್ ನೀಡಲು ನಿರ್ಧರಿಸಲಾಗಿದೆ.  

      ಇದು ಸರಿಸುಮಾರು 475 ಕೋಟಿ ರೂ.ಗಳಷ್ಟಾಗಬಹುದು. ಹಾಗಾಗಿ ಎಲ್ಲಾ ಠೇವಣಿದಾರರಿಗೂ ಹಣ ನೀಡಲಾಗುವುದಿಲ್ಲ. ಸಣ್ಣ ಠೇವಣಿದಾರರಿಗೆ ಆದ್ಯತೆ ನೀಡುವುದು ಅಥವಾ ಎಲ್ಲಾ ಠೇವಣಿದಾರರಿಗೂ ಶೇಕಡವಾರು ಪ್ರಮಾಣದಲ್ಲಿ ಹಣ ನೀಡುವ ಸಾಧ್ಯಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ