ಬೆಂಗಳೂರು:
ಉಪಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಅಶ್ವತ್ಥ್ ನಾರಾಯಣ್ ಹಾಗೂ ಸಚಿವ ಆರ್.ಅಶೋಕ್ ನಡುವಿನ ವೈಮನಸು ಮುಂದುವರೆದಿದ್ದು, ಮುಖ್ಯಮಂತ್ರಿಗಳ ನಗರ ಪರಿವೀಕ್ಷಣೆ ವೇಳೆ ಇದು ಬಹಿರಂಗಗೊಂಡಿದೆ.
ಇಂದು ಸಂಪುಟದ ಕೆಲ ಸದಸ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ನಗರದ ವಿವಿಧ ಭಾಗಗಳಲ್ಲಿ ಬಸ್ ಗಳಲ್ಲಿ ಪರಿವೀಕ್ಷಣೆ ನಡೆಸಿದರು. ಈ ವೇಳೆ ಮುಂದಿನ ಸೀಟಿನಲ್ಲಿ ಆರ್.ಅಶೋಕ್ ಹಿಂದೆ ಅಶ್ವತ್ಥನಾರಾಯಣ್ ಕೂತಿದ್ದರು. ಒಂದೇ ಬಸ್ ನಲ್ಲಿ ಕೂತಿದ್ದರೂ ಒಬ್ಬರಿಗೊಬ್ಬರು ಮುಖಗೊಟ್ಟು ಮಾತನಾಡಲಿಲ್ಲ. ಅಶೋಕ್ ಪಕ್ಕದಲ್ಲಿ ಆಸೀನರಾಗಿದ್ದ ಸಚಿವ ಬಸವರಾಜ ಬೊಮ್ಮಾಯಿಯ ಕೈಯನ್ನು ಅಶ್ವತ್ಥ ನಾರಾಯಣ್ ಕುಲುಕಿದರೆ ವಿನಃ ಅಶೋಕ್ ರನ್ನು ಮಾತನಾಡಿಸಲೇ ಇಲ್ಲ. ಇನ್ನು ಬಸ್ ಏರುವಾಗ ಇಬ್ಬರು ಎದುರುಬದರಾದರೂ ಸೌಜನ್ಯಕ್ಕೂ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ.
ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಅಶ್ವತ್ಥ ನಾರಾಯಣ್, ಮಾರತ್ತಹಳ್ಳಿಯ ಟೆಕ್ ಪಾರ್ಕ್ ಸಂಚಾರದ ಸಂದರ್ಭದಲ್ಲಿ ಅಶೋಕ್ ರನ್ನು ಜೊತೆಗೆ ಕರೆದೊಯ್ದು ತಮ್ಮಿಬ್ಬರ ನಡುವೆ ಏನಿಲ್ಲ ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ