ಕೊರೋನೊ ವೈರಸ್ : ರಾಜ್ಯದಲ್ಲಿ 72,542 ಜನರಿಗೆ ಪರೀಕ್ಷೆ!!!

ಬಳ್ಳಾರಿ :

        ರಾಜ್ಯ ಸರಕಾರ ಕೊರೋನ ವೈರಸ್ ಬಗ್ಗೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು, ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಈವರೆಗೂ 72542 ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

      ಬಳ್ಳಾರಿ ನಗರದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 49,594 ತಪಾಸಣೆ ಮಾಡಲಾಗಿದ್ದು, ನಿನ್ನೆ ಒಂದೇ ದಿನ 3,025. ಜನರ ಪರೀಕ್ಷೆ ಮಾಡಲಾಗಿದೆ. ಹೈದರಾಬಾದ್ ಮೂಲದ ಸಾಫ್ಟ್ ವೇರ್ ಇಂಜಿನೀಯರ್ ಒಬ್ಬರಿಗೆ ಕೊರೋನ ಇತ್ತು ಎನ್ನುವ ಮಾಹಿತಿ ಇತ್ತು. ಅವರು ಓಡಾಡಿದ ಕಾರ್, ವಸತಿ ಎಲ್ಲಿಡೆಯೂ ಪರೀಕ್ಷೆ ಮಾಡಲಾಗಿದೆ. ಆತನಿಗೆ ಬೆಂಗಳೂರಿನಲ್ಲಿ ಇದ್ದಾಗ ರೋಗ ಇರಲಿಲ್ಲ. ಹೈದರಾಬಾದ್‍ಗೆ ಹೋದಾಗ ರೋಗ ಪತ್ತೆಯಾಗಿತ್ತು. ರೋಗಿ ಇರೋ ಅಪಾಟ್ರ್ಮೆಂಟ್ ಪರಿಶೀಲನೆ ಮಾಡಲಾಗಿದೆ. ಈವರೆಗೂ ರಾಜ್ಯದಲ್ಲಿ ಒಂದು ಸಹ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಸದ್ಯ ರಾಜ್ಯದ 343 ಜನರ ರಕ್ತ ಪರಿಶೀಲನೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮೂವರಿಗೆ ರಕ್ತ ಪರೀಕ್ಷೆ ಕಳುಹಿಸಲಾಗಿದೆ ಎಂದರು.

      ಬಿಸಿಲು ಹೆಚ್ಚಿರೋ ಪ್ರದೇಶದಲ್ಲಿ ಈ ರೋಗ ಹರಡೋದಿಲ್ಲ. ಈ ಹಿಂದೆ ಪುನಾಗೆ ರಕ್ತ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಇದೀಗ ಬೆಂಗಳೂರಿನಲ್ಲಿಯೂ ಪರೀಕ್ಷೆ ಮಾಡಲಾಗುತ್ತಿದೆ. ಈವರೆಗೂ ಭಾರತದಲ್ಲಿ 31 ಜನರಲ್ಲಿ ಈ ರೋಗ ಪತ್ತೆಯಾಗಿದೆ. ಮೊಬೈಲ್ ಕಾಲರ್ ಟ್ಯೂನ್ ನಲ್ಲಿ ಸಹ ಈ ಬಗ್ಗೆ ಜಾಗೃತಿ ಮೂಡಿಸೋ ಕೆಲಸ ಮಾಡಲಾಗುತ್ತಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap