ಭಾರತದಲ್ಲಿ10 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ!!

ನವದೆಹಲಿ :

      ಮಹಾಮಾರಿ ದೇಶಾದ್ಯಂತ ಕ್ಷಿಪ್ರವಾಗಿ ಹರಡತೊಡಗಿದ್ದು, ಸದ್ಯ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ.

       ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 34,956 ಪ್ರಕರಣಗಳು ದಾಖಲಾಗಿದ್ದು, ಕೊರೋನಾ ಅಟ್ಟಹಾಸಕ್ಕೆ 687 ಜನ ಸಾವನ್ನಪ್ಪಿದ್ದಾರೆ. ಆ ಮೂಲಕ ಕೊರೋನಾದಿಂದ ಒಂದೇ ದಿನ ಅತಿ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

     ಭಾರತದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ದಿನದಿಂದ ಹಿಡಿದು ಈವರೆಗೆ ಒಟ್ಟು 1,003,832 ಪ್ರಕರಣಗಳು ವರದಿಯಾಗಿದ್ದು, 25,602 ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ 6.35 ಲಕ್ಷ ಜನರು ಗುಣಮುಖರಾಗಿರುವುದಾಗಿ ವರದಿ ವಿವರಿಸಿದೆ.

      ಒಟ್ಟು ಪ್ರಕರಣಗಳಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 3.4 ಲಕ್ಷಕ್ಕೆ ಏರಿಕೆಯಾಗಿದ್ದು, 6,35,757 ಜನರನ್ನು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap