ಪಾಕ್ ಸಂಪರ್ಕಿಸುವ ಥಾರ್​ ಲಿಂಕ್​ ಎಕ್ಸ್ ಪ್ರೆಸ್ ಸ್ಥಗಿತಗೊಳಿಸಿದ ಭಾರತ!!

ಜೋಧಪುರ್​:

      ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್​ 370 ರದ್ದುಗೊಳಿಸುತ್ತಿದ್ದಂತೆ ಭಾರತದ ವಿರುದ್ಧ ಆಕ್ರೋಶಗೊಂಡು ಸಂಜೋತಾ ರೈಲು ಸೇವೆ ಸ್ಥಗಿತಗೊಳಿಸಿದ್ದ ಪಾಕ್​ಗೆ ಇದೀಗ ಭಾರತ ಸಖತ್​ ಆಗಿ ತಿರುಗೇಟು ನೀಡಿದೆ.

      ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಿರ್ಧಾರ ಪಾಕಿಸ್ತಾನವನ್ನು ವಿಚಲಿತಗೊಳಿಸಿದ್ದು, ಎರಡೂ ರಾಷ್ಟ್ರಗಳ ಸಂಬಂಧಗಳಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದೆ. ಪಾಕಿಸ್ತಾನ ಜೋಧ್‍ಪುರ – ಕರಾಚಿಯನ್ನು ಸಂಪರ್ಕಿಸುವ ಥಾರ್ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದುಗೊಳಿಸಿದ್ದರೆ, ಭಾರತ ಈಗ ಜೋಧ್‍ಪುರ-ಮುನಾಬಾವೊ ಸಂಪರ್ಕಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್‌ ಸಂಚಾರಕ್ಕೆ ಬ್ರೇಕ್ ಹಾಕಿದೆ.

      ಮುಂದಿನ ಆದೇಶದವರೆಗೆ, ‘ಭಗತ್ ಕಿ ಕೋಥಿ-ಮುನಾಬಾವೊ-ಭಗತ್ ಕಿ ಕೋಥಿ’ ಮತ್ತು ‘ಮುನಾಬಾವೊ- ಜೀರೋ ಪಾಯಿಂಟ್-ಮುನಾಬಾವೊ’ ಥಾರ್ ಎಕ್ಸ್‌ಪ್ರೆಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವಾಯುವ್ಯ ರೈಲ್ವೆ ವಕ್ತಾರ ಅಭಯ್ ಶರ್ಮಾ ಅವರು ತಿಳಿಸಿದ್ದಾರೆ.

      ಭಾರತ-ಪಾಕ್​ ನಡುವೆ 2006ರಲ್ಲಿ ಥಾರ್​ ಲಿಂಕ್​ ಎಕ್ಸಪ್ರೆಸ್​ ಆರಂಭಗೊಂಡಿತ್ತು. ಇದಾದ ಬಳಿಕ ಉಭಯ ದೇಶಗಳ ಮಧ್ಯೆ ಅನೇಕ ಸಮಸ್ಯೆಗಳು ಉದ್ಭವಗೊಂಡಿದ್ದರೂ ಈ ಸೇವೆ ಸ್ಥಗಿತಗೊಂಡಿರಲಿಲ್ಲ. ಕಳೆದ 13 ವರ್ಷದಲ್ಲಿ ಇದೇ ಮೊದಲ ಬಾರಿಗೆ ಈ ಸೇವೆ ಸ್ಥಗಿತಗೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap