ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಐಪಿಎಸ್​ ಅಧಿಕಾರಿಯಿಂದ ಪತಿ ವಿರುದ್ಧ ದೂರು!!

ಬೆಂಗಳೂರು : 

       ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಹಿಳಾ ಐಪಿಎಸ್​ ಅಧಿಕಾರಿಯೊಬ್ಬರು ತಮ್ಮ ಪತಿಯ ವಿರುದ್ಧ ನಗರದ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

      2009ರ ಬ್ಯಾಚ್​​ನ ಅಧಿಕಾರಿ ಅಗಿರುವ ವರ್ತಿಕಾ 2011 ರಲ್ಲಿ ನಿತೀನ್ ಸುಬಾಶ್ ರವರೊಂದಿಗೆ ವಿವಾಹ ಅಗಿದ್ದರು. ಐಎಫ್​ಎಸ್​ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿಯಾಗಿರುವ ನಿತೀನ್​, ಕೆಲ ರಾಯಬಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಪತಿಗೆ ಕುಡಿಯುವ‌ ಮತ್ತು ಧೂಮಪಾನ ಮಾಡುವ ಅತಿಯಾದ ಚಟವಿದೆ. ಇದನ್ನು ಬಿಡುವಂತೆ ಹಲವು ಬಾರಿ ಹೇಳಿದಾಗಲು ಜಗಳ ಮಾಡಿ ಹಲ್ಲೆ ಮಾಡಿದ್ದಾರೆ. 

      ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದಾರೆ. ಅಲ್ಲದೆ ಹಣಕ್ಕಾಗಿ ಪದೇ ಪದೇ ಪಿಡಿಸುತ್ತಿದ್ದಾರೆ. ನನ್ನ ಅಜ್ಜಿಯ ಬಳಿ ಐದು ಲಕ್ಷದ ಚೆಕ್ ಪಡೆದಿದ್ದ ನಿತೀನ್, ಮನೆ ಮಾಡುವಾಗ 35 ಲಕ್ಷ ಹಣ ಪಡೆದಿದ್ದರು. ಇದೀಗ ಇನ್ನು ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾರೆಂ, ವರದಕ್ಷಿಣೆ ನೀಡದಿದ್ದರೆ ವಿಚ್ಛೇಧನ ಕೊಡುವುದಾಗಿ ಹೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

      ಇದೀಗ ವರ್ತಿಕಾ  ಪತಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap