ಶಿವಮೊಗ್ಗ :
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸಂಬಂಧಿ ಪರಮೇಶ್ ಅವರ ಬ್ಯಾಂಕ್ ಲಾಕರ್ನಲ್ಲಿ 6.5 ಕೋಟಿ ರೂ. ನಗದು ಪತ್ತೆಯಾಗಿದೆ.
ಹೌದು, ದೇವೇಗೌಡರ ಸಂಬಂಧಿ ಪರಮೇಶ್ವರ ಮಾಲೀಕತ್ವದ ಶ್ರುತಿ ಮೋಟಾರ್ಸ್ ಶೋ ರೂಂ ಮತ್ತು ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ ಪರಮೇಶ್ ಅವರು ಕೀ ಕಳೆದು ಹೋಗಿದೆ ಅಂತ ಹೇಳಿದ್ದರು. ಆ ವೇಳೆಯಲ್ಲಿ ಅಧಿಕಾರಿಗಳು ಕೀ ನೀಡದೇ ಹೋದರೆ ಕಾನೂನು ಪ್ರಕಾರ ಲಾಕರ್ ಅನ್ನು ಒಡೆಯುವ ಬಗ್ಗೆ ಹೇಳಿದ ಬಳಿಕ ಕೀ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಪರಮೇಶ್ ಅವರಿಗೆ ಸಂಬಂಧಿಸಿದ ಲಾಕರ್ ನಲ್ಲಿದ್ದ ಎರಡು ಸಾವಿರ ರೂ ಮುಖ ಬೆಲೆಯ 6.5 ಕೋಟಿ ಹಣವನ್ನು ವಶಪಡೆದುಕೊಂಡು ಶ್ರುತಿ ಮೋಟಾರ್ಸ್ ಗೆ ಸಂಬಂಧಪಟ್ಟ ಎಲ್ಲಾ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ.
ಐಟಿ ದಾಳಿ ವಿರುದ್ಧ ಕಾಂಗ್ರೆಸ್ – ಜೆಡಿಎಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು. ಆದ್ರೀಗ ಐಟಿ ದಾಳಿಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರ ಸಂಬಂಧಿಯ ಬ್ಯಾಂಕ್ ಲಾಕರ್ ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗುವುದು ಜೆಡಿಎಸ್ ನಾಯಕರಿಗೆ ತೀವ್ರ ಹಿನ್ನಡೆ ಉಂಟುಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
