ಐಟಿ ದಾಳಿ : ಬಂಧನದ ಭೀತಿಯಲ್ಲಿ ಶಾಸಕ ಜಮೀರ್‌!!

ಬೆಂಗಳೂರು :

     ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್ ನೀಡಿದ್ದು, ಜಮೀರ್ ಅಹ್ಮದ್ ರ  ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

     ಐಟಿ ಅಧಿಕಾರಿಗಳು ಬಂದಿರೋ ಸಮಯದಲ್ಲಿ ಜಮೀರ್‌ ಆಹ್ಮದ್‌ ಮನೆಯಲ್ಲೇ ಇದ್ದರು ಎನ್ನಲಾಗಿದ್ದು, ಎರಡು ಕಾರಿನಲ್ಲಿ ಆಗಮಿಸಿರುವ ಅಧಿಕಾರಿಗಳು ಈಗಾಗಲೇ ಜಮೀರ್‌ ಆಹ್ಮದ್‌ ಅವರ ಮನೆಯನ್ನು ತಪಾಸಣೆ ನಡೆಸುತ್ತಿದ್ದಾರೆ. ಇದಲ್ಲದೇ ಕೋವಿಡ್‌ ಸಮಯದಲ್ಲಿ ಜಮೀರ್‌ ಹಣಕಾಸಿನ ವ್ಯವಹಾರದ ಜೊತೆಗೆ ಅದಾಯ ತೆರಿಗೆ ಸಂಬಂದಪಟ್ಟಂತೆ ವ್ಯತ್ಯಾಸ ಇರುವುದರಿಂದ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

      ಇದಕ್ಕೆ ಸಂಬಂಧಪಟ್ಟಂತೆ ವಿವರಣೆ ನೀಡದೇ ಇರುವ ಹಿನ್ನಲೆಯಲ್ಲಿ ಅಧಿಕಾರಿಗಳು ಇಂದು ಬೆಳಗ್ಗೆ ಶಿವಾಜಿನಗರ ವ್ಯಾಪ್ತಿಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಜಮೀರ್ ಅವರ ಮನೆ, ಚಾಮರಾಜಪೇಟೆಯಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಜಮೀರ್ ಒಡೆತನದ ಫ್ಲ್ಯಾಟ್ ಸೇರಿದಂತೆ ಹಲವು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.\

     ಜಮೀರ್‌ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬಹುದಾಗಿದೆ, ಇಲ್ಲದೇ ಅವರಿಗೆ ಇಂತಹ ದಿನಾಂಕದೊಳಗೆ ಅದಾಯಕ್ಕೆ ಸಂಬಂಧಪಟ್ಟಂತೆ ಕಂಡು ಬಂದಿರುವ ಮಾಹಿತಿಗೆ ಅದಾಯದ ಮೂಲವನ್ನು ತೋರಿಸಿ ಅಂತ ಐಟಿ ಅಧಿಕಾರಿಗಳು ನೋಟಿಸ್‌ ನೀಡಬಹುದಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap