ಜೆಡಿಎಸ್ ನ 8, ಬಿಜೆಪಿಯ ಐವರ ಮೇಲೆ FIR..!!!

0
178

ಹಾಸನ: 

      ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​ನ 8 ಹಾಗೂ ಬಿಜೆಪಿಯ 5 ಮಂದಿ ವಿರುದ್ಧ ಹಾಸನದ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

     ಆಪರೇಷನ್‌ ಕಮಲಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಆಡಿಯೋ ಟೇಪ್‌ನಲ್ಲಿ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಹೆಸರು ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ ಹಾಸನದಲ್ಲಿ ಶಾಸಕರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. 

ಬಿಜೆಪಿ ಶಾಸಕನ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರ ದಾಳಿ

      ಜೆಡಿಎಸ್​ ಕಾರ್ಯಕರ್ತರಾದ ದಿವಂಗತ ಮಾಜಿ ಶಾಸಕ ಪ್ರಕಾಶ್​ ಅವರ ಪುತ್ರ ಸ್ವರೂಪ್, ಮಾಜಿ ನಗರಸಭಾಧ್ಯಕ್ಷ ಅನಿಲ್, ಹೊಂಗೆರೆ ರಘು, ತಮ್ಲಾಪುರ ಚೇತನ್ ಸೇರಿದಂತೆ 8 ಮಂದಿ ಮೇಲೆ ಎಫ್​ಐಆರ್ ದಾಖಲಾಗಿದ್ದರೆ, ಬಿಜೆಪಿಯ ಹಾಲಿ ನಗರಸಭೆ ಸದಸ್ಯ ಪುನೀತ್ ಸೇರಿ ಐವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here