ಶಿವಮೊಗ್ಗ : ‘ಜೆಡಿಎಸ್’ ಅಧ್ಯಕ್ಷ ಬಿಜೆಪಿಗೆ!!

ಶಿವಮೊಗ್ಗ :

      ಚುನಾವಣೆಗೆ ಬೆಂಬಲಿಸಬೇಕಾದ ಜೆಡಿಎಸ್ ನಾಯಕರೇ ಪಕ್ಷ ಬಿಡುತ್ತಿರುವುದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಜೆಡಿಎಸ್ ಗೆ ಭಾರೀ ಶಾಕ್ ನೀಡಿದೆ.

       ಈಗಾಗಲೇ ಸಾಮೂಹಿಕ ರಾಜೀನಾಮೆ ನೀಡಿದ್ದ ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಮದನ್, ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಮದನ್ ಅವರು ಸ್ವೀಕರಿಸಿದ್ದಾರೆ. ಬುಧವಾರ 200 ಕ್ಕೂ ಹೆಚ್ಚು ಪದಾಧಿಕಾರಿಗಳ ಸಹಿತ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

      ಮದನ್ ಅವರು ಶಾಂತವೇರಿ ಗೋಪಾಲಗೌಡರ ಮೊಮ್ಮಗನಾಗಿದ್ದು, ತಾಲೂಕಿನಲ್ಲಿ ಜೆಡಿಎಸ್ ಅಸ್ಥಿತ್ವಕ್ಕೆ ಮುಖ್ಯ ಕಾರಣರಾಗಿದ್ದ ಯುವ ನಾಯಕ ಎಂದು ಹೆಸರು ಪಡೆದವರು. ಅಷ್ಟೇ ಅಲ್ಲದೆ, 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿ ಮದನ್ ಅವರು ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡರ ವರ್ತನೆಯಿಂದ ಬೇಸತ್ತ ನಾಯಕರು ಈ ನಿರ್ಧಾರ ಕೈಗೊಂಡಿದ್ದಾರೆ.

      ಸದ್ಯ ಲೋಕಸಭೆ ಚುನಾವಣೆಯ ಹೊತ್ತಲ್ಲೇ ಜೆಡಿಎಸ್ ನಾಯಕರು ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕ್ಷೇತ್ರದಲ್ಲಿ ಪಕ್ಷಕ್ಕೆ ಬಾರಿ ಪೆಟ್ಟು ಬೀಳಲಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ