ಪರಪ್ಪನ ಜೈಲುಪಾಲಾದ ಶಾಸಕ ಗಣೇಶ್!!

ಬೆಂಗಳೂರು:

      ರೆಸಾರ್ಟ್ ನಲ್ಲಿ ಹೊಸಪೇಟೆ ಕ್ಷೇತ್ರದ ಶಾಸಕ ಅನಂದ್ ಸಿಂಗ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಆದೇಶವನ್ನು ನೀಡಲಾಗಿದೆ.

      ಪ್ರಕರಣ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಗಣೇಶ್ ಅವರನ್ನು ನಿನ್ನೆ ಗುಜರಾತಿನ ಸೋಮನಾಥದಲ್ಲಿ ಬುಧವಾರದಂದು ಬಂಧಿಸಿ,   ಇಂದು ಮುಂಜಾನೆ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಪೊಲೀಸರು ಬಿಡದಿ ಪೊಲೀಸ್​ ಠಾಣೆಗೆ ಹಾಜರು ಪಡಿಸಿದ್ದರು. ಬಳಿಕ ರಾಮನಗರ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.

      ಈ ವೇಳೆ ವಿಚಾರಣೆ ನಡೆಸಿದ ರಾಮನಗರ ಜಿಲ್ಲಾ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ 14 ದಿನಗಳ  ಶಿಕ್ಷೆ ವಿಧಿಸಿ ​ ಆದೇಶ ನೀಡಿದೆ. ಗಣೇಶ್ ಅವರನ್ನು ರಾಮನಗರ ಅಥವಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ