ವಾಹನದ ನಂಬರ್ ಪ್ಲೇಟ್‌ನಲ್ಲಿ ಅಂಕಿಗಳು ಕನ್ನಡದಲ್ಲಿದ್ದ ಕಾರಣಕ್ಕೆ ದಂಡ ಹಾಕಿರುವ ಘಟನೆ ಬೆಳಗಾವಿಯ ಜೀಜಾಮಾತ ವೃತ್ತದ ಬಳಿ ನಡೆದಿದೆ.
ನಂಬರ್ ಪ್ಲೇಟ್ ಕನ್ನಡದಲ್ಲಿ ಇದೆ ಎಂಬ ಕಾರಣಕ್ಕೆ ದೋಷಪೂರಿತ ನಂಬರ್ ಪ್ಲೇಟ್ ಎಂದು ಅಲ್ಲಿನ ಪೊಲೀಸರು ವಾಹನ ಸವಾರನಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ.
ಕನ್ನಡದ ಅಂಕಿ ಬರೆದಿದ್ದಕ್ಕೆ ದಂಡ ಹಾಕಿರುವುದು ಹಾಗೂ ಅರ್ಥವಾಗುವುದಿಲ್ಲ ಎಂದು ಸವಾರನಿಗೆ ಹೇಳಿರುವುದು ಖಂಡನೀಯ ಎಂದು ಅಲ್ಲಿನ ಕನ್ನಡ ಸಂಘಟನೆಗಳು ವಿರೋಧ ಮಾಡುತ್ತಿವೆ.
ಮರಾಠಿಗರು ಎಷ್ಟೋ ಜನ ಕನ್ನಡಿಗರನ್ನು ಕೆಣಕುವಂತಹ ಘೋಷಣೆಗಳನ್ನು ವಾಹನದ ಮೇಲೆ ಹಾಕಿಕೊಂಡಿರುತ್ತಾರೆ. ಅಂತವರಿಗೆ ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಕನ್ನಡದಲ್ಲಿ ನಂಬರ್ ಪ್ಲೇಟ್ ಬರೆಸಿದ್ದಕ್ಕೆ ದಂಡ ಹಾಕಿದರೆ ಹೇಗೆ ಎನ್ನುತ್ತಿದ್ದಾರೆ.