ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಕೊರೊನಾಗೆ ಬಲಿ!

ಬೆಂಗಳೂರು :

     ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ನಿರ್ದೇಶಕರಾದ ಭರತ್ ಅವರು ನಿನ್ನೆ ತಡರಾತ್ರಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. 

     ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಮೋಹಕ ತಾರೆ ರಮ್ಯಾ ಅಭಿನಯದ ಕಂಠಿ ಚಿತ್ರ ನಿರ್ದೇಶಿಸುವ ಮೂಲಕ ಚಿತ್ರ ಪಯಣ ಆರಂಭಿಸಿದ ರಾಮನಗರ ಚಿಕ್ಕಮುಳುವಾಡಿ ಗ್ರಾಮದ 45 ವರ್ಷದ ಭರತ್ ಹೊಸ ಸಿನಿಮಾದ ತಯಾರಿಯಲ್ಲಿರುವಾಗಲೇ ತಮ್ಮ ಬಣ್ಣದ ಲೋಕದ ಪಯಣ ಮುಗಿಸಿದ್ದಾರೆ.

     ವಿಜಯನಗರದ ಅತ್ತಿಗುಪ್ಪೆಯಲ್ಲಿ ನೆಲೆಸಿದ್ದ ಭರತ್ ಕೆಲವು ದಿನಗಳಿಂದ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಕೊರೊನಾ ಕಾಣಿಸಿಕೊಂಡಿದ್ದು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

      ಭರತ್ ಅವರು ಪತ್ನಿ, ಪುತ್ರಿ, ಸಹೋದರಿ ಹಾಗೂ ತಾಯಿಯನ್ನು ಅಗಲಿದ್ದು  ಅವರ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಯುವ ನಿರ್ದೇಶಕ ಭರತ್ ಅವರ ಹತಾಠ್ ನಿಧನಕ್ಕೆ ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap