ಬೆಂಗಳೂರು :

ಕೇಂದ್ರ ಸರ್ಕಾರ ಜಾರಿಗೆ ತಂದ ದುಬಾರಿ ದಂಡ ಟ್ರಾಫಿಕ್ ರೂಲ್ಸ್ ಕಡಿತಕ್ಕೆ ಇಂದೇ (ಸೋಮವಾರ) ಬ್ರೇಕ್ ಬೀಳುವ ಇಳಿಕೆ ಮಾಡುವ ಅಧಿಕೃತ ಆದೇಶ ಇಂದು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಸೆಪ್ಟಂಬರ್ 1 ರಂದು ಜಾರಿಗೆ ತಂದ ದುಬಾರಿ ದಂಡ ಟ್ರಾಫಿಕ್ ರೂಲ್ಸ್ ವಾಹನ ಸವಾರರಿಗೆ ಹೊರೆಯಾಗಿ ಪರಿಣಮಿಸಿದ ಹಿನ್ನಲೆಯಲ್ಲಿ ವಾಹನ ಸವಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈಗಾಗಲೇ ಗುಜರಾತ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ದುಬಾರಿ ದಂಡವನ್ನು ಕಡಿತಗೊಳಿಸಿದೆ.
ಈಗಾಗಲೇ ಸಾರಿಗೆ ಇಲಾಖೆಯು ದಂಡ ಮೊತ್ತದ ಇಳಿಕೆ ಪ್ರಮಾಣವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ದಿನವಾಗಿದ್ದರಿಂದ ಆದೇಶ ಹೊರಬಿದ್ದಿರಲಿಲ್ಲ. ಬಹುತೇಕ ಇಂದು ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
2 ದಿನಗಳ ಹಿಂದೆ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದಂಡದ ಪ್ರಮಾಣ ಹೊರೆಯನ್ನು ಕಡಿಮೆ ಮಾಡಲೇಬೇಕು, ಇದಕ್ಕಾಗಿ ಗುಜರಾತ್ ಮಾದರಿಯ ಪರಿಷ್ಕರಣೆಗೆ ಆದೇಶ ಪ್ರತಿಗಳನ್ನು ತರಿಸಿ ಅಧ್ಯಯನ ನಡೆಸಿ ಎಂದು ಸಲಹೆ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








