ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ : SIT ತನಿಖೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : 

     ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

     ಎಸ್‌ಐಟಿ ತಂಡದಲ್ಲಿ ಕಬ್ಬನ್ ಪಾರ್ಕ್ ಎಸಿಪಿ, ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್, ಸಿಸಿಬಿ ಎಸಿಪಿ, ಇನ್ಸ್‌ಪೆಕ್ಟರ್ ಗಳು, ಸೈಬರ್ ಕ್ರೈಮ್ ಪೊಲೀಸರು ಸೇರಿದಂತೆ ಒಟ್ಟು 20ಕ್ಕು ಹೆಚ್ಚು ಅಧಿಕಾರಿಗಳನ್ನು ಸಿಡಿ ಪ್ರಕರಣದ ತನಿಖೆಗೆ ನೇಮಕ ಮಾಡಲಾಗಿದೆ. ಎ ಮತ್ತು ಬಿ ತಂಡಗಳಾಗಿ ಎಸ್‌ಐಟಿ ತಂಡವನ್ನು ವಿಂಗಡಣೆ ಮಾಡಿ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ರಾಜ್ಯದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಆದ್ದರಿಂದ ಶೀಘ್ರದಲ್ಲಿ ವರದಿ ನೀಡುವಂತೆ ಎಸ್ ಐ ಟಿಗೆ ಸೂಚಿಸಲಾಗಿದೆ. ತನಿಖೆ ನಂತರ ಅಗತ್ಯ ಎನಿಸಿದರೆ ಎಸ್ ಐ ಟಿ , ಎಫ್ ಐ ಆರ್ ದಾಖಲಿಸಿಕೊಳ್ಳಲಿದೆ ಎಂದು ಹೇಳಿದರು. ಇದು ಫೇಕ್ ಆಗಿದ್ದರೆ, ಫೇಕ್ ಸಿಡಿ ಮಾಡಿದವರು ಯಾರು? ಇದರ ಹಿನ್ನೆಲೆ ಯಾರು? ಎಲ್ಲಿ ಆಗಿದೆ ಎಂಬುದರ ಬಗ್ಗೆ ತನಿಖೆ ಆಗಬೇಕು. ಒಟ್ಟರೆ ತನಿಖೆಯಿಂದ ಎಲ್ಲಾ ಆಯಾಮಗಳು ಗೊತ್ತಾಗುತ್ತವೆ ಎಂದು ತಿಳಿಸಿದರು.

     ಈ ಸಿಡಿಯಿಂದ ನನ್ನ ಮಾನಹಾನಿ ಅಗಿದೆ. ಇದರಲ್ಲಿ ಷಡ್ಯಂತ್ರ ಇದೆ. ಇದರ ಹಿಂದೆ ಕೆಲವರು ಇದ್ದಾರೆ. ಆದ್ದರಿಂದ ತನಿಖೆ ಮಾಡಿ ಎಂದು ರಮೇಶ ಜಾರಕಿಹೊಳಿ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ತನಿಖಾ ತಂಡ ರಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap