ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ!!

      2019-20 ನೇ ಸಾಲಿನ‌ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏಪ್ರಿಲ್ 29 ಮತ್ತು 30 ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಣಯಿಸಿದೆ. 
      ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮೇ 1ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದ್ದು, 4ನೇ ತರಗತಿ ಮಟ್ಟದ ಈ ಪರೀಕ್ಷೆಗೆ 50 ಅಂಕ ನಿಗದಿಪಡಿಸಲಾಗಿದೆ. 

      ಇನ್ನು, ವೈದ್ಯ ಮತ್ತು ದಂತ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮೇ 5ರಂದು ನಡೆಸಲಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 

      ಇಂಜಿನಿಯರಿಂಗ್‌ ಸೇರಿದಂತೆ ಇತರೆ ತಾಂತ್ರಿಕ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಏ. 23 ರಂದು ಜೀವಶಾಸ್ತ್ರ,  ಗಣಿತ ಮತ್ತು ಏ. 24 ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು.

ಪರಿಷ್ಕೃತ ವೇಳಾಪಟ್ಟಿ ಹೀಗಿದೆ.. 

29-04-2019- ಜೀವಶಾಸ್ತ್ರ, ಗಣಿತ
30-04-2019- ಭೌತಶಾಸ್ತ್ರ, ರಸಾಯನಶಾಸ್ತ್ರ
01-05-2019- ಕನ್ನಡ ಭಾಷಾ ಪರೀಕ್ಷೆ 

ಇನ್ನು ಪರೀಕ್ಷೆಯು ಬೆಳಗ್ಗೆ 10.30 ರಿಂದ -11.50 ರ ವರೆಗೆ, ಮಧ್ಯಾಹ್ನ 2.30-3.50 ರ ವರೆಗೆ ನಡೆಯಲಿದೆ.

ಮೇ 1 ಬುಧವಾರ 11.30ರಿಂದ 12.30 ಕನ್ನಡ ಭಾಷಾ ಪರೀಕ್ಷೆ (ಗಡಿನಾಡು-ಹೊರನಾಡು ಕನ್ನಡಿಗರಿಗೆ ಮಾತ್ರ) 50 . ಪರಿಷ್ಕೃತ ವೇಳಾಪಟ್ಟಿಯನ್ನು  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್​ನಲ್ಲಿ ನೋಡಬಹುದಾಗಿದೆ‌‌.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 
 

Recent Articles

spot_img

Related Stories

Share via
Copy link