ಬೆಂಗಳೂರು:
2019ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 5.10 ಕೋಟಿ ಜನರು ಮತದಾನ ಮಾಡಬಹುದಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ತಿಳಿಸಿದ್ದಾರೆ.
ಏಪ್ರಿಲ್ 18 ಮತ್ತು 23ರಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಮತದಾರರ ಪಟ್ಟಿ ಅಂತಿಮಗೊಂಡಿದೆ. ಇದರ ಪ್ರಕಾರ 5.10 ಕೋಟಿ ಜನರು ಮತದಾನ ಮಾಡಲು ಅರ್ಹರಿದ್ದಾರೆ ಎಂದು ತಿಳಿಸಿದ್ದಾರೆ.
2014ರ ಚುನಾವಣೆಯಲ್ಲಿ 4.62 ಕೋಟಿ ಮತದಾರರು ಇದ್ದರು. ಈ ಬಾರಿ 4,661 ತೃತೀಯ ಲಿಂಗಿಗಳು ಸೇರಿದಂತೆ 5.10 ಕೋಟಿ ಜನರು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ.
2.58 ಕೋಟಿ ಪುರುಷ, 2.52 ಕೋಟಿ ಮಹಿಳಾ, 4,661 ತೃತೀಯ ಲಿಂಗಿಗಳು ಮತದಾನ ಮಾಡಬಹುದಾಗಿದ್ದು, 18 ರಿಂದ 19 ವರ್ಷ ವಯಸ್ಸಿನ 10 ಲಕ್ಷ ಹೊಸ ಮತದಾರರು ಈ ಬಾರಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ