ಬೆಂಗಳೂರು :
ಲಾಕ್ ಹಿನ್ನೆಲೆಯಲ್ಲಿ ರಾಜ್ಯದ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳ ರಜೆಯನ್ನು ಏಪ್ರಿಲ್ 30 ರ ವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಏಪ್ರಿಲ್ 14 ರವರೆಗೆ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ವಿಚಾರಣಾ, ಜಿಲ್ಲಾ ನ್ಯಾಯಾಲಯಗಳಿಗೆ ರಜೆ ನೀಡಲಾಗಿತ್ತು. ಲಾಕ್ ಡೌನ್ ಮುಂದುವರೆಯಲಿರುವ ಹಿನ್ನೆಲಯಲ್ಲಿ ಏಪ್ರಿಲ್ 30 ರ ವರೆಗೆ ರಜೆ ವಿಸ್ತರಿಸಲಾಗಿದೆ.
Karnataka High Court, all Trial/District Courts in the State to remain closed till April 30 in view of the extended lockdown declared in Karnataka.#COVID2019#COVID19 pic.twitter.com/CnjpOPezs5
— Bar & Bench (@barandbench) April 13, 2020
ಈ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ ಪ್ರಕಟಣೆ ಹೊರಡಿಸಿದ್ದು, ವಿಚಾರಣಾ ನ್ಯಾಯಾಲಯ, ಜಿಲ್ಲಾ, ಕಾರ್ಮಿಕ, ಕೌಟುಂಬಿಕ ಮತ್ತು ಕೈಗಾರಿಕಾ ನ್ಯಾಯ ಮಂಡಳಿಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ, ತುರ್ತು ಪ್ರಕರಣಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
