ಬೆಂಗಳೂರು :
ಕ್ವಾರಿಗಳಲ್ಲಿ ಸುರಿದ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಬಯೋಮೈನಿಂಗ್ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದ ಹಸಿರು ನ್ಯಾಯಮಂಡಳಿಯ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ಬಿಬಿಎಂಪಿಗೆ ನ್ಯಾಯಾಲಯ 5 ಕೋಟಿ ರೂ. ದಂಡ ವಿಧಿಸಿದೆ.
ಒಂದು ತಿಂಗಳೊಳಗಾಗಿ ದಂಡದ ಮೊತ್ತವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು. ಆ ಹಣವನ್ನು ಮಂಡಳಿ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಹಸಿರು ನ್ಯಾಯಮಂಡಳಿ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಪೀಠ ತೀರ್ಪು ನೀಡಿದೆ.
ನಗರದಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ 4500 ಟನ್‍ಗೂ ಹೆಚ್ಚು ಕಸವನ್ನು ಬಿಬಿಎಂಪಿ ಬೆಂಗಳೂರು ಉತ್ತಮ ತಾಲೂಕಿನಲ್ಲಿರುವ ಕ್ವಾರಿಗಳಲ್ಲಿ ಸುರಿಯುತ್ತಿತ್ತು. ಈ ಕುರಿತಂತೆ ವಾದ-ವಿವಾದ ಆಲಿಸಿದ ಹಸಿರು ನ್ಯಾಯಮಂಡಳಿ ಬಿಬಿಎಂಪಿ ಅಧಿಕಾರಿಗಳಿಗೆ ಕ್ವಾರಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸುರಕ್ಷಿತ ವಿಲೇವಾರಿ ಮಾಡಲು ಬಯೋಮೈನಿಂಗ್ ಅಳವಡಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆದರೆ, ಕ್ವಾರಿಗಳಲ್ಲಿ ಸಂಗ್ರಹವಾಗುವ ಕಸವನ್ನು ಹಾಗೆಯೇ ಬಿಟ್ಟ ಬಿಬಿಎಂಪಿ ಅದರ ಮೇಲೆ ಮಣ್ಣಿನ ಹೊದಿಕೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಮಾಡಿದ ತಪ್ಪಿಗೆ 5 ಕೋಟಿ ರೂ. ದಂಡ ಪಾವತಿಸಬೇಕು. ಆ ಹಣದಿಂದ ಕ್ವಾರಿ ಸುತ್ತಮುತ್ತಲ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳುವಂತೆ ತೀರ್ಪು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ