ಬೆಂಗಳೂರು :
ಶಾಸಕರು ವೈಯಕ್ತಿಕವಾಗಿ ಕಚೇರಿಗೆ ಬಂದು ನನಗೆ ರಾಜೀನಾಮೆ ಪತ್ರ ನೀಡದ ಕಾರಣ ಅದನ್ನು ಅಂಗೀಕರಿಸುವುದಿಲ್ಲ’ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ವಿಧಾನಸೌಧದ ಸ್ವೀಕರ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ರಾಜೀನಾಮೆ ನೀಡಿರುವ ಶಾಸಕರನ್ನು ವೈಯಕ್ತಿಕವಾಗಿ ಕರೆದು ಮಾತನಾಡುತ್ತೇನೆ. ಅವರನ್ನು ವೈಯಕ್ತಿಕವಾಗಿ ಕರೆದು ಮಾತನಾಡದ ಹೊರತು ಅವರ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
14 ಶಾಸಕರು ರಾಜೀನಾಮೆ ಸಲ್ಲಿಸುವ ದಿನದಂದು ನಾನು ವೈಯಕ್ತಿಕ ಕಾರಣದಿಂದಾಗಿ ಹೊರಗೆ ಇದ್ದೆ. ಯಾರೂ ನನ್ನ ಅನುಮತಿಯನ್ನು ಪಡೆದು ಬಂದು ಕಚೇರಿಗೆ ರಾಜೀನಾಮೆ ಸಲ್ಲಿಸಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಬಂದು ರಾಜೀನಾಮೆ ನೀಡಿರುವ ಪತ್ರಗಳಿಗೆ ನಾನು ಹೊಣೆಯಲ್ಲ ಎಂದು ಹೇಳಿದರು. ಅವರು ಮೊದಲೇ ಅನುಮತಿ ಕೋರಿದ್ದರೆ ಕಚೇರಿಯಲ್ಲಿ ಇರುತ್ತಿದ್ದೆ ಎಂದು ತಿಳಿಸಿರುವ ಸ್ಪೀಕರ್ ಇದೀಗ ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ಖಡಾಖಂಡಿತವಾಗಿ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಲು ನಿರಾಕರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ