ಜಮಖಂಡಿಗೆ ದಿಢೀರ್ ಭೇಟಿ : ಶಾಸಕರ ವಿರುದ್ಧ ವೇಣುಗೋಪಾಲ್ ಗರಂ..!?

ಬೆಂಗಳೂರು:

      ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ದಿಢೀರ್ ಭೇಟಿ ನೀಡಿ, ಫುಲ್ ಗರಂ ಆದ ಪ್ರಸಂಗ ನಡೆಯಿತು. 

      ಗುರುವಾರ ರಾತ್ರಿ ಕೆ.ಸಿ.ವೇಣುಗೋಪಾಲ್ ಜಮಖಂಡಿಗೆ ದಿಢೀರ್ ಭೇಟಿ ನೀಡಿದರು. ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ನಾಯಕರು ಸಹ ಈ ಭೇಟಿ ಕಂಡು ಅಚ್ಚರಿಗೊಂಡರು. ಪ್ರಚಾರಕ್ಕೆ ಗೈರಾಗಿದ್ದ ನಾಯಕರು ಒಂದು ಕ್ಷಣ ಆತಂಕಗೊಂಡರು.

      ಉಪಚುನಾವಣೆ ಉಸ್ತುವಾರಿ ಹೊತ್ತ ನಾಯಕರು ಕ್ಷೇತ್ರಕ್ಕೆ ಇನ್ನೂ ಕಾಲಿಡದ ಕಾರಣ ಬೇಸರ ವ್ಯಕ್ತಪಡಿಸಿರುವ ಅವರು, ಕ್ಷೇತ್ರದ ಉಸ್ತುವಾರಿ ಹೊತ್ತವರೇಕೆ ಪ್ರಚಾರದಲ್ಲಿ ಪಾಲ್ಗೊಳುತ್ತಿಲ್ಲ ಎಂದು ಪ್ರಶ್ನಿಸಿದರು. 

       ಹಾಲಿ ಹಾಗೂ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ 30ಕ್ಕೂ ಹೆಚ್ಚು ಜನರನ್ನು ಕಾಂಗ್ರೆಸ್ ಜಮಖಂಡಿಗೆ ವೀಕ್ಷಕರನ್ನಾಗಿ ನೇಮಿಸಿದೆ. ಆದರೆ, 15ಕ್ಕೂ ಹೆಚ್ಚು ಜನರು ಕ್ಷೇತ್ರದತ್ತ ತಲೆ ಹಾಕಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ವೇಣುಗೋಪಾಲ್ ಅವರು, ಕ್ಷೇತ್ರಕ್ಕೆ ಇನ್ನೂ ಕಾಲಿಡದ ನಾಯಕರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು. 

      ಸಭೆಯಲ್ಲಿ‌ ಕೆಪಿಸಿಸಿ‌ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ‌ ಸಚಿವ ವಿನಯ್ ಕುಲಕರ್ಣಿ, ಮಾಜಿ ‌ಸಚಿವ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವ ಶಿವಾನಂದ ಪಾಟೀಲ್, ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಬಾಗಲಕೋಟೆ-ವಿಜಯಪುರ ಜಿಲ್ಲೆಯ ವಿವಿಧ ನಾಯಕರು ಪಾಲ್ಗೊಂಡಿದ್ದರು. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap